ಕುಂದಾಪುರ: ರಾಷ್ಟ್ರೀಯ ಪಲ್ಸ್ ಪೋಲಿಯೊ ಸ್ವಯಂಸೇವಕಿಗೆ ನಾಯಿ ಕಚ್ಚಿದ ಘಟನೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದ್ದು. ಪಲ್ಸ್ ಪೋಲಿಯೊ ಸ್ವಯಂ ಸೇವಕಿಯನ್ನು ಆಸ್ಪತ್ರೆಗೆ ದಾಖಲಿಸಿ ಬಿಡುಗಡೆ ಗೊಳಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಸ್ವಯಂಸೇವಕಿ ಅಪಾಯದಿಂದ ಪಾರಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆಯ ಏರ್ಪಾಟು ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ತಿಳಿಸಿದ್ದಾರೆ. ನಗರದಲ್ಲಿ ಬೀದಿ ನಾಯಿ ಉಪಟಳ ಹೆಚ್ಚಳಗೊಂಡಿದೆ ಈಗಾಗಲೇ ಪುರಸಭೆ ವ್ಯಾಪ್ತಿಯ ಹಲವರು ನಾಯಿ ಕಡಿತಕ್ಕೆ ತುತ್ತಾದ ಘಟನೆಗಳು ನಡೆದಿವೆ. ಪುರಸಭೆಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ