ಕುಂದಾಪುರ : ನಗರದ ಮಧ್ಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವು ಮಾರ್ಚ್ 8 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ
ಮಾರ್ಚ್ 8ರಂದು ಬೆಳಿಗ್ಗೆ 9:00 ಗಂಟೆಯಿಂದ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಬೆಳಿಗ್ಗೆಯಿಂದ ದೇವಸ್ಥಾನದ ವತಿಯಿಂದ ನಿರಂತರವಾಗಿ ಉಚಿತ ಪ್ರಸಾದ ವಿತರಣೆ ನಡೆಯಲಿದ್ದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಇವರಿಂದ ಅಖಂಡ ಭಜನ ಕಾರ್ಯಕ್ರಮ ನೆರವೇರಲಿದೆ ರಾತ್ರಿ ಗಂಟೆ 7.00 ರಿಂದ ನೃತ್ಯವಿಧುಷಿ ಪವಿತ್ರ ಅಶೋಕ್ ಅವರ ನಿರ್ದೇಶನದಲ್ಲಿ ನೃತ್ಯ ವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಪ್ರದರ್ಶನಗೊಳ್ಳಲಿದೆ
ರಾತ್ರಿ 9.00 ಕ್ಕೆ ಶ್ರೀ ಕುಂದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ರಂಗಪೂಜೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು ಮೇಲಿನ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಸ್ ಕೃಷ್ಣಾನಂದ ಚಾತ್ರರವರು ವಿನಂತಿಸಿದ್ದಾರೆ
ಆಡಳಿತ ಮಂಡಳಿಯ ಸದಸ್ಯರು : ಶ್ರೀ ಸತೀಶ್ ಶೆಟ್ಟಿ ,ವಿಶ್ವನಾಥ್ ಪೂಜಾರಿ ,ನಾಗರಾಜ್ ರಾಯಪ್ಪನಮಠ ,ಜಯಾನಂದ ಖಾರ್ವಿ, ಸತೀಶ್, ವೀಣಾ ಎಚ್, ಸವಿತಾ ಜಗದೀಶ