Home » ದೇಶದ ಪ್ರಥಮ ಜಲಾಂತರ್ಗತ ಮೆಟ್ರೋಗೆ ಮೋದಿ ಚಾಲನೆ
 

ದೇಶದ ಪ್ರಥಮ ಜಲಾಂತರ್ಗತ ಮೆಟ್ರೋಗೆ ಮೋದಿ ಚಾಲನೆ

by Kundapur Xpress
Spread the love

ನವದೆಹಲಿ : ದೇಶದ ಪ್ರಥಮ ಜಲಾಂತರ್ಗತ ಮೆಟ್ರೋ ರೈಲನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಕೋಲ್ಕತದಲ್ಲಿ ಉದ್ಘಾಟಿಸಿದರು. ಈ ಮೂಲಕ ಕೋಲ್ಕತ ನಿವಾಸಿಗಳ 53 ವರ್ಷಗಳ ಬೃಹತ್ ಕನಸನ್ನು ಅವರು ನನಸಾಗಿಸಿದರು. ಪ್ರಧಾನಿ ಈ ರೈಲಿನಲ್ಲಿ ಪ್ರಯಾಣಿಸಿದ್ದು, ಸಹ ಪ್ರಯಾಣಿಕರ ಜತೆ ಸಂವಹನ ಕೂಡ ನಡೆಸಿದರು. ಜತೆಗೆ ಕೋಲ್ಕತ ಮೆಟ್ರೋದ ವಿವಿಧ ಮಾರ್ಗಗಳನ್ನೂ ಉದ್ಘಾಟಿಸಿದರು.

ಸಾರ್ವಜನಿಕ ಸಾರಿಗೆಯನ್ನು ಅತ್ಯಾಧುನಿಕಗೊಳಿಸುವುದು ಸರ್ಕಾರದ ಆದ್ಯತೆ. ನಾನು ಚಿಕ್ಕವನಿದ್ದಾಗ ಮೊದಲ ಸಲ ಕೋಲ್ಕತಗೆ ಬಂದಿದ್ದಾಗ ಮೆಟ್ರೋವನ್ನು ನೋಡುವುದೇ ಒಂದು ಆಕರ್ಷಣೆ ಆಗಿತ್ತು. ಇಂದು ಮೆಟ್ರೋ ಬೆಳವಣಿಗೆ ಕೂಡ ಬಿಜೆಪಿಯ ತೀವ್ರಗತಿಯ ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿಯಾಗಿದೆ. 2014ಕ್ಕೂ ಹಿಂದಿನ 40 ವರ್ಷಗಳಲ್ಲಿ ಕೋಲ್ಕತ ಮೆಟ್ರೋ ಮಾರ್ಗ 28 ಕಿ.ಮೀ.ಗೆ ವಿಸ್ತರಿಸಲಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ 31 ಕಿ.ಮೀ.ನಷ್ಟು ಮೆಟ್ರೋ ಮಾರ್ಗ ಸೇರಿಸಲಾಗಿದೆ ಎಂದು ಮೋದಿ ಹೇಳಿದರು.

   

Related Articles

error: Content is protected !!