ಉಡುಪಿ: ಮಹಾ ಶಿವರಾತ್ರಿ ಪ್ರಯುಕ್ತ ಮಾ. 8 ರಂದು ಪ್ರಾಣಿವಧೆ ಮಾಡುವುದನ್ನು ರಾಜ್ಯ ಸರಕಾರವು ನಿಷೇಧಿಸಿ ಆದೇಶಿಸಿದ್ದು, ಈ ಪ್ರಯುಕ್ತ ಮಾ. 8 ರಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕೋಳಿ ಹಾಗೂ ಮಾಂಸ ವಧೆ ಮತ್ತು ಮಾರಾಟ ಮಾಡುವುದನ್ನು ನಿಷೇದಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.