Home » ನಿಪ್ಪಾಣಿಯ ಶ್ರೀರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ
 

ನಿಪ್ಪಾಣಿಯ ಶ್ರೀರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ

by Kundapur Xpress
Spread the love

ಬೆಳಗಾವಿ: ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜನಮಾನಸದಲ್ಲಿರುವಾಗಲೇ ದುಷ್ಕರ್ಮಿಗಳು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿರುವ ರಾಮ ಮಂದಿರ ಸ್ಪೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದಾರೆ. ಈಹಿನ್ನೆಲೆಯಲ್ಲಿ ಮಂದಿರಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಂದಿರದಲ್ಲಿ ಮಾ.19 ಮತ್ತು ಮಾ.20 ರಂದು ಕಳಸಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮಧ್ಯೆ, ಅನಾಮಧೇಯ ದುಷ್ಕರ್ಮಿಗಳು ಮಾ.20 ಹಾಗೂ ಮಾ. 21ರೊಳಗಾಗಿ ರಾಮ ಮಂದಿರ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಅಲ್ಲಾ ಹು ಅಕ್ಟರ್‌ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದಿದ್ದಾರೆ. ಫೆ.7 ಮತ್ತು ಫೆ.28 ರಂದು ಎರಡು ಬೆದರಿಕೆ ಪತ್ರಗಳನ್ನು ಬರೆದು, ದೇವಸ್ಥಾನದ ಆವರಣದಲ್ಲಿ ಎಸೆದು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಿಗೂ ಸೂಕ್ತ ಭದ್ರತೆ ಒದಗಿಸಲು * ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದ್ದಾರೆ

   

Related Articles

error: Content is protected !!