ಕಾರವಾರ : ನಾನು ಇರುವ ತನಕ ಖಂಡಿತ ಕಾಂಗ್ರೆಸ್ಗೆ ನವರಿಗೆ ನೆಮ್ಮದಿ ಕೊಡುವುದಿಲ್ಲ. ದೇಶವನ್ನು ಲೂಟಿ ಮಾಡಿರುವ, ದೇಶವನ್ನು ಹಾಳು ಮಾಡಿರುವ ಕಾಂಗ್ರೆಸ್ಗೆ ನವರಿಗೆ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಹಿಂದೂ ವಿರೋಧಿ, ಅಭಿವೃದ್ಧಿ ವಿರೋಧಿ, ದೇಶ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ ಆಗಿದ್ದು, ನಮ್ಮ ದೇಶದಲ್ಲಿ ಇರಬಾರದು. ನಮಗೆ ವಿರೋಧ ಪಕ್ಷ ಬೇಕು. ಆದರೆ ಒಳ್ಳೆಯ ವಿರೋಧ ಪಕ್ಷ ಬರಬೇಕು. ಕಾಂಗ್ರೆಸ್ ಗೆ ಪರ್ಯಾಯವಾಗಿ ಮತ್ತೊಂದು ರಚನಾತ್ಮಕವಾಗಿರುವ ವಿರೋಧ ಪಕ್ಷ ಗೆದ್ದು ಬರಲಿ. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿರೋಧ ಪಕ್ಷ ಇರಬೇಕು. ಆದರೆ ಈ | ರೀತಿಯ ಮನೆ ಮುರುಕ ಕಾಂಗ್ರೆಸ್ ಇರಬಾರದು. ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಅವಾಂತರಗಳನ್ನು ನೋಡಿದರೆ ಯಾರಿಗೂ ನಿದ್ದೆ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ನಡುವೆ ಕೆಲವರು ಹೋಲಿಕೆ ಮಾಡುತ್ತಿದ್ದಾರೆ. ಆದರೆ ಆನೆಗೂ ಕುರಿಗೂ ಇರುವಂತಹ ಅಜಗಜಾಂತರ ವ್ಯತ್ಯಾಸ ಬುದ್ದಿವಂತರಿಗೆ ಗೊತ್ತಾಗಿದೆ. ಆನೆ ಮತ್ತು ಕುರಿಯನ್ನು ಯಾರೂ ಕೂಡಾ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.