ಉಡುಪಿ: ಸರಕಾರಿ ಪೌಢಶಾಲೆ ಕುಕ್ಕೆಹಳ್ಳಿ ಇದರ ವಿವೇಕ ಕೊಠಡಿಗೆ 33 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುರಂದರ ಕೋಟ್ಯಾನ್, ಉಪಾಧ್ಯಕ್ಷರಾದ ಜಯಶ್ರೀ, ಗ್ರಾಮ ಪಂಚಾಯತ್ ಸದಸ್ಯರಾದ ಶಂಕರ್ ಸಾಲಿಯಾನ್, ಸುನಿತಾ ನಾಯ್ಕ್ ಸ್ಥಳೀಯರಾದ ಸುಧಾಕರ್ ಶೆಟ್ಟಿ ವಳಮಾಡಿ, ಶಿಲ್ಪಾ ಸಾಲಿಯಾನ್ ಪೌಢಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.