Home » ಕೆ.ಎಸ್. ಈಶ್ವರಪ್ಪ ಬಂಡಾಯ ಸ್ಪರ್ಧೆ
 

ಕೆ.ಎಸ್. ಈಶ್ವರಪ್ಪ ಬಂಡಾಯ ಸ್ಪರ್ಧೆ

by Kundapur Xpress
Spread the love

ಶಿವಮೊಗ್ಗ :  ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದಲ್ಲಿ ಪಕ್ಷ ಉಳಿಸಲು, ಒಂದೇ ಕುಟುಂಬದ ಹಿಡಿತದಿಂದ ಪಕ್ಷವನ್ನು ರಕ್ಷಿಸಲು, ಹಿಂದುತ್ವ ಉಳಿಸಲು, ರಾಜ್ಯಾದ್ಯಂತ ನೊಂದ ಕಾರ್ಯಕರ್ತರ ಧ್ವನಿಯಾಗಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಘೋಷಣೆ ಮಾಡಿದರು.

ನಗರದಲ್ಲಿ ಶುಕ್ರವಾರ ಸಂಜೆ ಕರೆದಿದ್ದ ತಮ್ಮ ಬೆಂಬಲಿಗರ, ಹಿತೈಷಿಗಳ ಸಭೆಯಲ್ಲಿ ಅಭಿಪ್ರಾಯ ಸಂಗ್ರಹದ ಬಳಿಕ ಅವರು ಮಾತನಾಡಿದರು. ನಾನು ಮೋದಿ ವಿರುದ್ದ ಇಲ್ಲ. ನನ್ನ ಪ್ರಾಣ ಇರುವ ತನಕ ಮೋದಿ ಮತ್ತು ಹಿಂದುತ್ವ ನನ್ನ ಉಸಿರಾಗಿರುತ್ತದೆ. ಬಿಜೆಪಿ ಈಗಲೂ ನನ್ನ ತಾಯಿಯ ಹಾಗೆ. ಆದರೆ, ಕೆಲವರು ನನ್ನ ತಾಯಿಯ ಕುತ್ತಿಗೆ ಹಿಸುಕುವುದನ್ನು ಹೇಗೆ ನೋಡುತ್ತಾ ಕುಳಿತಿರಲಿ?. ಇದನ್ನು ಕೇಂದ್ರ ನಾಯಕರು ಗಮನಿಸಿ, ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ಸರಿಪಡಿಸುವ ಯತ್ನ ನಡೆಸಲಿ ಎನ್ನುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ಹಿಂದುತ್ವದ ಪ್ರಖರ ಪ್ರತಿಪಾದಕರಾದ ನಳಿನ್ ಕುಮಾರ್‌ಕಟೀಲ್‌, ಸದಾನಂದಗೌಡ, ಸಿ.ಟಿ. ರವಿ, ಪ್ರತಾಪ್ ಸಿಂಹ ಮತ್ತು ನಾನು ಸೇರಿದಂತೆ ಅನೇಕ ನಾಯಕರಿಗೆ, ಕಾರ್ಯಕರ್ತರಿಗೆ ಅನ್ಯಾಯ ಮಾಡಲಾಗುತ್ತಿದೆ. ಒಂದೇ ಕುಟುಂಬ ರಾಜ್ಯದಲ್ಲಿ ಇಡೀ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಇದನ್ನು ನೋಡುತ್ತಾ ಹೇಗೆ ಸುಮ್ಮನೆ ಕುಳಿತುಕೊಳ್ಳಲಿ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರಿನಲ್ಲಿ ಶೋಭಾ ಅಲ್ಲಿನ ಕಾರ್ಯಕರ್ತರು ಗೋಬ್ಯಾಕ್ ಎಂಬ ಚಳವಳಿ ಮಾಡಿದರು. ಬಳಿಕ ಬೆಂಗಳೂರು ಉತ್ತರಕ್ಕೆ ಟಿಕೆಟ್ ಕೊಡಿಸಿದರು. ಕಾಂಗ್ರೆಸ್‌ಗೆ ಹೋಗಿ ವಾಪಸ್ ಬಂದ ಶೆಟ್ಟರ್‌ಗೆ ಬೆಳಗಾವಿಯಿಂದ ಟಿಕೆಟ್ ಎಂದು ಯಡಿಯೂರಪ್ಪ ಪ್ರಕಟಿಸಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ಪ್ರಕಟಿಸುವ ಮುನ್ನವೇ ಯಡಿಯೂರಪ್ಪ ಹೇಗೆ ಟಿಕೆಟ್ ಪ್ರಕಟಿಸುತ್ತಾರೆ. ನನ್ನ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡಿಸಿ, ಗೆಲ್ಲಿಸುವ ಭರವಸೆ ನೀಡಿದ್ದ ಯಡಿಯೂರಪ್ಪ ಬಳಿಕ ಯಾಕೆ ಟಿಕೆಟ್ ಕೊಡಿಸಲಿಲ್ಲ.ಹಾವೇರಿಯಲ್ಲಿ ಬೊಮ್ಮಾಯಿ ಅವರು ತಮಗೆ ಸ್ಪರ್ಧಿಸುವ ಇಚ್ಛೆಯಿಲ್ಲ ಎಂದು ಹೇಳಿದ್ದರು. ಆದರೂ, ಅವರನ್ನು ನಿಲ್ಲಿಸುತ್ತಿದ್ದಾರೆ ಎಂದರು.

   

Related Articles

error: Content is protected !!