ಮುತ್ತತ್ತಿ – ಇದು ಸೀತಾಮಾತೆಯ ಮೂಗುತಿಯನ್ನು ಆಂಜನೇಯನು ಹುಡುಕಿ ಕೊಟ್ಟಂತಹ ಪುಣ್ಯ ಸ್ಥಳ ಆಂಜನೇಯ ಶ್ರೀರಾಮನ ಬಂಟ ಆಂಜನೇಯ ಮಾಡಿದ ಪವಾಡಗಳಿಗೆ ಲೆಕ್ಕವಿಲ್ಲ. ತನ್ನ ಹೃದಯದಲ್ಲಿ ಸೀತಾರಾಮರನ್ನು ಪ್ರತಿಷ್ಠಾಪನೆ ಮಾಡಿಕೊಂಡು ರಾಮನಿಗಾಗಿಯೇ ಬದುಕಿಕೊಂಡು ಬಂದಂತಹ ಅಪ್ಪಟ ಶ್ರೀರಾಮ ಭಕ್ತ.
ಮುತ್ತತ್ತಿ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯಲ್ಲಿದೆ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ ಕಾವೇರಿ ನದಿಯ ತಟದಲ್ಲಿರುವ ಈ ದೇವಸ್ಥಾನ ಅತ್ಯಂತ ರಮಣೀಯ ಮತ್ತು ಪ್ರಕೃತಿ ಸೌಂದರ್ಯದಿಂದ ಕೂಡಿದೆ.ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ
ಲಂಕೆಯಲ್ಲಿ ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ಅಯೋಧ್ಯೆಗೆ ಸೀತಾಮಾತೆ,ಲಕ್ಷ್ಮಣ ಮತ್ತು ಹನುಮಂತನ ಜೊತೆಗೂಡಿ ಹಿಂದಿರುಗುತ್ತಿದ್ದಾಗ ಬಸವನ ಬೆಟ್ಟ ಅರಣ್ಯ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಒಂದು ದಿನ ಇಲ್ಲೇ ತಂಗಿ ಹೋಗಲು ನಿರ್ಧರಿಸುತ್ತಾರೆ .ಮರುದಿನ ಬೆಳಗ್ಗೆ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ತಾಯಿ ಸೀತಾಮಾತೆದೇವಿ ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮುತ್ತಿನ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗುತ್ತದೆ ಪ್ರಭು ಶ್ರೀರಾಮನೊಂದಿಗೆ ಸೀತಾಮಾತೆಯು ಈ ಘಟನೆಯನ್ನು ಹೇಳಿದಾಗ ಪ್ರಭು ಶ್ರೀ ರಾಮನು ಹನುಮಂತನಿಗೆ ಸೀತಾಮಾತೆಯ ಮೂಗುತಿಯನ್ನು ಹುಡುಕಿಕೊಡಲು ಅಜ್ಞಾಪಿಸುತ್ತಾನೆ .ಆಂಜನೇಯಸ್ವಾಮಿ ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಕಳೆದುಹೋಗಿದ್ದ ಮುತ್ತಿನ ಮೂಗುತಿ ಕಾಣಿಸಿದಾಗ ಹನುಮಂತನು ಮೂಗುತಿಯನ್ನು ಸೀತಾಮಾತೆಗೆ ನೀಡಿದನು.
ಹನುಮಂತ ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗದಲ್ಲಿ ಇಂದಿಗೂ ಕಾವೇರಿ ನದಿಯ ನೀರು ಒಂದು ಸುತ್ತು ತಿರುಗಿ ಹೋಗುತ್ತದೆ ಆದ ಕಾರಣ ಆ ಸ್ಥಳಕ್ಕೆ ತಿರುಗಣೆಮಡು ಎಂದು ಕರೆದು ಪ್ರಸಿದ್ದಿಯಾಗಿದೆ ಸೀತಾಮಾತೆಯು ಆಂಜನೇಯ ಸ್ವಾಮಿಗೆ ಮುತ್ತೆತ್ತಿರಾಯನಾಗಿ ಹೆಸರಿಟ್ಟು ಈ ಕ್ಷೇತ್ರದಲ್ಲಿ ನೆಲೆಸಿ ಎಂಬ ಕಾರಣಕ್ಕೆ ಮುತ್ತತ್ತಿ ಆಂಜನೇಯ ಸ್ವಾಮಿಯನ್ನುಮುತ್ತೆತ್ತಿರಾಯ ಎಂದು ಕರೆಯುತ್ತಾರೆ. ಮುತ್ತತ್ತಿರಾಯ ಆಂಜನೇಯ ಸ್ವಾಮಿಯ ಪವಾಡ ಅಪಾರ. ಭಕ್ತರ ಪಾಲಿನ ಆಂಜನೇಯ ಸ್ವಾಮಿಯಾಗಿ ತನ್ನ ಪವಾಡಗಳನ್ನು ತೋರಿಸುತ್ತಾ ಇಲ್ಲಿ ನೆಲೆ ನಿಂತಿದ್ದಾನೆ ಮುತ್ತತ್ತಿರಾಯ ಆಂಜನೇಯ ಸ್ವಾಮಿ
ಪ್ರದೀಪ್ ಚಿನ್ಮಯಿ ಆಸ್ಪತ್ರೆ ಕುಂದಾಪುರ