Home » ಪೇಜಾವರ ಶ್ರೀ ಅಭಿನವ ಆಂಜನೇಯ
 

ಪೇಜಾವರ ಶ್ರೀ ಅಭಿನವ ಆಂಜನೇಯ

ಪುತ್ತಿಗೆ ಶ್ರೀ

by Kundapur Xpress
Spread the love

ಉಡುಪಿ :  ಆಯೋಧ್ಯೆಯಲ್ಲಿ ಬಾಲರಾಮನ ವೈಭವದ ಪ್ರತಿಷ್ಠೆ ನಂತರ ಅಖಂಡ 48 ದಿನಗಳ ಕಾಲ ಮಂಡಲ ಪೂಜೆ ಮುಗಿಸಿ ಬಂದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಕೃಷ್ಣಮಠದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿನವ ಆಂಜನೇಯ ಬಿರುದು ನೀಡಿ ಗೌರವಿಸಿದರು

ಇದಕ್ಕೆ ಮೊದಲು ಅಯೋಧ್ಯೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪೇಜಾವರ ಶ್ರೀಗಳನ್ನು ಭಕ್ತಾಭಿಮಾನಿಗಳು  ಸ್ವಾಗತಿಸಿ ಉಡುಪಿಗೆ ಬರಮಾಡಿಕೊಂರು ಮಂಗಳೂರಿನಿಂದ  ಉಡುಪಿಯವರೆಗೆ ವಾಹನ ಜಾಥಾದಲ್ಲಿ ಬಂದ ಶ್ರೀ ಗಳನ್ನು ಅಲ್ಲಿಲ್ಲಿ ಮಾಲಾರ್ಪಣೆಯ ಮೂಲಕ ಭಕ್ತರು ಗೌರವಿಸಿದರು

ಉಡುಪಿ ನಗರದ ಜೋಡುಕಟ್ಟೆಗೆ ಬಂದ ಶ್ರೀ ಗಳನ್ನು ನಂತರ ತೆರೆದ ವಾಹನದಲ್ಲಿ ನೂರಾರು ಬೈಕುಗಳ ಭವ್ಯ ಯಾತ್ರೆಯಲ್ಲಿ ನಗರದೊಳಗೆ ಬರಮಾಡಿಕೊಳ್ಳಲಾಯಿತು. ರಥಬೀದಿಯ  ಹೊರಭಾಗದ ಸಂಸ್ಕ್ರತ ಕಾಲೇಜಿನಿಂದ ಕೃಷ್ಣಮಠದವರೆಗೆ ಮಂಗಳವಾದ್ಯ ಘೋಷ, ಚಂಡೆವಾದನ, ವಿಶೇಷ ಮೆರವಣಿಗೆಯಲ್ಲಿ ಶ್ರೀಗಳನ್ನು ಕರೆ ತರಲಾಯಿತು.

ಎರಡು ತಿಂಗಳ ಬಳಿಕ ಉಡುಪಿಗೆ ಬಂದ ಶ್ರೀಗಳು ಮೊದಲು ರಥಬೀದಿಯ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಕೃಷ್ಣಮಠಕ್ಕೆ ಬಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನಗೈದರು. ಅವರಿಗೆ ಚಂದ್ರಶಾಲೆಯಲ್ಲಿ ಮಠದ ಸಾಂಪ್ರದಾಯಿಕ ಗಂಧಾಗ್ಯುಪಾಚಾರ ಫಲಪುಷ್ಪ ಮಾಲಿಕೆ ಮಂಗಳಾರತಿ ಅರ್ಪಿಸಲಾಯಿತು

ಅಲ್ಲಿಂದ ರಾಜಾಂಗಣಕ್ಕೆ ಕರೆ ತಂದು ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ಸಾರ್ವಜನಿಕವಾಗಿ ಅದ್ದೂರಿಯ ಸನ್ಮಾನ ನಡೆಸಲಾಯಿತು. ಪುತ್ತಿಗೆ ಕಿರಿಯ ಶ್ರೀ ಸುಪ್ರೀಂದ್ರ ತೀರ್ಥರನ್ನು ಕೂಡಿಕೊಂಡು ಪುತ್ತಿಗೆ ಶ್ರೀಗಳು ಪೇಜಾವರ ಶ್ರೀಗಳಿಗೆ ಹಾರ, ಶಾಲು, ಫಲ, ಪುಷ್ಪ ಕಿರೀಟ ಧಾರಣೆ ಮಾಡಿ, ಬೃಹತ್ ಕಡಗೋಲು ನೀಡಿ ಪುಷ್ಪಾರ್ಚನೆಗೈದು ರಜತ ಫಲಕ ಅಭಿನಂದನ ಪತ್ರವಿತ್ತು ಗೌರವಿಸಿದರು ಈ ಸಂರ್ಭದಲ್ಲಿ ಶಾಸಕ ಯಶ್ಪಾಲ್‌ ಸುವರ್ಣ ಮಾಜಿ ಶಾಸಕ ರಘುಪತಿ ಭಟ್‌ ಮತ್ತಿತರರು ಉಪಸ್ಥಿತರಿದ್ದರು

   

Related Articles

error: Content is protected !!