ಕುಂದಾಪುರ: ಬಗ್ವಾಡಿ ಮಹಿಷಮರ್ದಿನಿ ದೇವಸ್ಥಾನದ ಕಚೇರಿಯ ವ್ಯವಸ್ಥಾಪಕ, ದೇವಲ್ಕುಂದ ನಿವಾಸಿ ಬಚ್ಚು ಕುಂದರ್ (83ವರ್ಷ) ಅವರು ಮಂಗಳವಾರ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪುತ್ರ ಇದ್ದಾರೆ. ಶಿಕ್ಷಣ ಇಲಾಖೆಯ ಉದ್ಯೋಗಿಯಾಗಿದ್ದ ಇವರು ನಿವೃತ್ತಿಯ ಬಳಿಕ ದೇವಳದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಶಾಖೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು