ಭೂತಾನ್ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ 2 ದಿನಗಳ ಭೂತಾನ್ ಪ್ರವಾಸ ಆರಂಭಿಸಿದ್ದಾರೆ. ಅವರಿಗೆ ಭೂತಾನ್ ಅತ್ಯುಚ್ಚ ನಾಗರಿಕ ಪುರಸ್ಕಾರವಾಗಿರುವ ‘ಆರ್ಡರ್ ಆಫ್ ದ ಡ್ರಕ್ ಗ್ಯಾಲ್ಲೋ’ ಅನ್ನು ಭೂತಾನ್ ಅರಸ ಜಿಗ್ಡೆ ಖೇಸರ್ ನಾಮ್ ಗೇಲ್ ವಾಂಗ್ ಚುಕ್ ಅವರು ಪ್ರದಾನ ಮಾಡಿದ್ದಾರೆ: ವಿಶೇಷ ಎಂದರೆ, ಈ ಗೌರವ ಈವರೆಗೆ ಯಾವೊಬ್ಬ ವಿದೇಶಿ ನಾಯಕರಿಗೂ ಸಿಕ್ಕಿರಲಿಲ್ಲ. ಭಾರತ-ಭೂತಾನ್ ಬಾಂಧವ್ಯಕ್ಕೆ ಹಾಗೂ ಭೂತಾನ್ ದೇಶ ಮತ್ತು ಭಾರತೀಯರಿಗೆ ಅಸಾಧಾರಣ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಗಿದೆ ಎಂದು ಭೂತಾನ್ ಸರ್ಕಾರ ತಿಳಿಸಿದೆ.
ಭಾರತದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿ, ಪ್ರಚಾರದ ಕಾವು ತಾರಕಕ್ಕೇರುತ್ತಿರುವಾಗಲೇ ಭೂತಾನ್ ಪ್ರವಾಸ ಕೈಗೊಂಡಿದ್ದು ವಿಶೇಷವಾಗಿದೆ. ಮಾ.20, 21 ರಂದು ಈ ಪ್ರವಾಸ ನಿಗದಿಯಾಗಿತ್ತಾದರೂ, ಪ್ರತಿಕೂಲ ಹವಾಮಾನದ ಕಾರಣಕ್ಕೆ ಒಂದು ದಿನ ವಿಳಂಬವಾಗಿ ಪ್ರವಾಸ ಆರಂಭವಾಗಿದೆ.