ಮಹಿಳೆಯಿಂದ 1 ಕೋಟಿಗೂ ಅಧಿಕ ವಂಚನೆ
ಕುಂದಾಪುರ: ಇಲ್ಲಿಗೆ ಸಮೀಪದ ಕುಂದಬಾರಂದಾಡಿಯಲ್ಲಿ ಪದ್ಮಾ ರೋಯಲ್ ಚಾಲೆಂಜ್ ಸ್ಕೀಮ್ ನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕುಂದಬಾರಂದಾಡಿಯ ರತ್ನ ಎಂಬವರು ದೂರು ನೀಡಿದ್ದು ಪದ್ಮಾ ಹಗ್ಡೆ ಹಾಗೂ ಮೂಕಾಂಬು ಎಂಬವರು ಸೇರಿ ನೀವು ನಮ್ಮಲ್ಲಿ ಸದಸ್ಯರಾದರೆ ನಿಮ್ಮನ್ನು ಕ್ಯಾಶಿಯರ್ ಆಗಿ ನೇಮಕ ಮಾಡಿಕೊಳ್ಳುತ್ತೇವೆ ಹಾಗೆ 2ಲಕ್ಷ ರೂ.ಠೇವಣಿ ಇಟ್ಟರೆ ತಿಂಗಳಿಗೆ 20 ಸಾವಿರ ರೂ.ಸಂಬಳ ನೀಡುತ್ತೇವೆ ಎಂದು ನಂಬಿಸಿದ್ದರು ಅದರಂತೆ ರತ್ನಾ ಅವರು ಕೆಲಸಕ್ಕೆ ಸೇರಿಕೊಂದು 131 ಗ್ರಾಹಕರನ್ನು ಸಂಸ್ಥೆಗೆ ಸೇರ್ಪಡೆಗೊಳಿಸಿದ್ದರು
ಗ್ರಾಹಕರಿಗೆ ಹೆಚ್ಚಿನ ಮೊತ್ತದ ಬಡ್ಡಿ ನೀಡುವುದಾಗಿ ಹೇಳಿ ವಾರಕ್ಕೆ 500ರೂ ನಂತೆ 50 ಕಂತು ಕಟ್ಟಿದಲ್ಲಿ ಅವರಿಗೆ 34ಸಾವಿರ ನೀಡುವುದಾಗಿ ವಾರಕ್ಕೆ 950ರೂ ನಂತೆ 50 ಕಂತು ಕಟ್ಟಿದಲ್ಲಿ 68 ಸಾವಿರ,ತಿಂಗಳಿಗೆ 1 ಸಾವಿರದಂತೆ 12 ಕಂತು ಕಟ್ಟಿದರೆ 17 ಸಾವಿರ ರೂಪಾಯಿ ಒಂದು ವರ್ಷಕ್ಕೆ 50 ಸಾವಿರ ಡೆಪಾಸಿಟ್ ಇಟ್ಟರೆ 80 ಸಾವಿರ ನೀಡುವುದಾಗಿ ಆಮಿಷ ಒಡ್ಡಿ ಒಟ್ಟು 1 ಕೋಟಿ 7 ಲಕ್ಷದ 60ಸಾವಿರದ 615 ರೂಪಾಯಿಯನ್ನು ಸಂಗ್ರಹಿಸಿ ಮರಳಿ ನೀಡದೆ ಗ್ರಾಹಕರನ್ನು ವಂಚಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ