Home » ರಾಮ ಮಂದಿರದಲ್ಲಿ ಹೋಳಿ ಆಚರಣೆ
 

ರಾಮ ಮಂದಿರದಲ್ಲಿ ಹೋಳಿ ಆಚರಣೆ

by Kundapur Xpress
Spread the love

ಅಯೋಧ್ಯೆ : ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಸೋಮವಾರ ಭವ್ಯ ಹೋಳಿ ಆಚರಣೆ ನಡೆಯಿತು. ವಿವಿಧ – ಸ್ಥಳಗಳಿಂದ ಜನರು ಮುಂಜಾನೆಯೇ ದೇವಸ್ಥಾನಕ್ಕೆ ಆಗಮಿಸಿ ಬಾಲರಾಮನಿಗೆ ಬಣ್ಣ ಮತ್ತು ಗುಲಾಲ್ ಅರ್ಪಿಸಿದರು. ನಂತರ ಇಡೀ ರಾಮ ಜನ್ಮಭೂಮಿಯ ಆವರಣ ಬಣ್ಣಗಳ ಹಬ್ಬದ ಸಂತೋಷದಲ್ಲಿ ಮುಳುಗಿತು. ರಾಮನ ಆಸ್ಥಾನದಲ್ಲಿ ಅರ್ಚಕರು ವಿಗ್ರಹದ ಮೇಲೆ ಹೂವುಗಳನ್ನು ಸುರಿಸಿ, ರಾಗ್‌ ಭೋಗ್‌ನ ಭಾಗವಾಗಿ ಅಬಿರ್ ಮತ್ತು ಗುಲಾಲ್ ಅರ್ಪಿಸುವುದರೊಂದಿಗೆ ಭಗವಂತನೊಂದಿಗೆ ಹೋಳಿ ಆಡಿದರು. ಪ್ರಭು ಶ್ರೀರಾಮನಿಗೆ 56 ರೀತಿಯ ಖಾದ್ಯಗಳನ್ನು ಸಮರ್ಪಿಸಲಾಯಿತು. ಅರ್ಚಕರು ಭಕ್ತರೊಂದಿಗೆ ಹಾಡುಗಳನ್ನು ಹಾಡಿದರು ಹೋಳಿ ಮತ್ತು ರಾಮಲಲಾನನ್ನು ಮೆಚ್ಚಿಸಲು ವಿಗ್ರಹದ ಮುಂದೆ ನೃತ್ಯ ಮಾಡಿದರು

ರಾಮ ಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ರಾಮಲಲಾ ಪ್ರತಿಷ್ಠಾಪನೆಯ ನಂತರ ಮೊದಲ ಹೋಳಿ ಆಚರಿಸುತ್ತಿದ್ದಾರೆ. ‘ ಬಾಲರಾಮನ ಆಕರ್ಷಕ ವಿಗ್ರಹವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಹಣೆಯ ಮೇಲೆ ಗುಲಾಲ್ ಬಳಿಯಲಾಗಿದೆ. ಸಂದರ್ಭದಲ್ಲಿ ರಾಮಲಲಾ ವಿಗ್ರಹವನ್ನು ಗುಲಾಬಿ ಬಣ್ಣದ ಉಡುಪಿನಿಂದ ಅಲಂಕರಿಸಲಾಗಿದೆ ಎಂದರು.

   

Related Articles

error: Content is protected !!