Home » ವಾರ್ಷೀಕ ಜಾತ್ರಾ ಮಹೋತ್ಸವಕ್ಕೆ ಚಾಲನೆ
 

ವಾರ್ಷೀಕ ಜಾತ್ರಾ ಮಹೋತ್ಸವಕ್ಕೆ ಚಾಲನೆ

by Kundapur Xpress
Spread the love

ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾ.25ರಿಂದ ಏ. 3ರವರೆಗೆ ನಡೆಯಲಿರುವ ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಬೆಳಿಗ್ಗೆ ದೇವಳದ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ನಾಂದಿ ಪುಣ್ಯಾಹ, ಅಂಕುರಾವಾಸಸಿಂಹಯಾಗದನಂತರ 11-30ಕ್ಕೆ ಮಿಥುನ ಲಗ್ನ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು

ಮಧ್ಯಾಹ್ನ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿತು. ಸಂಜೆ ಯಾಗಶಾಲಾ ಪ್ರವೇಶ, ರಜ್ಜು ಬಂಧನ, ಮುಹೂರ್ತಬಲಿ, ಭೇರಿತಾಡನ, ಕೌತುಕ ಬಂಧನದ ಬಳಿಕ ರಾತ್ರಿ ನಗರೋತ್ಸವ ನಡೆಯಿತು. ದೇವಳದ ಕಾರ್ಯನಿರ್ವಾಹಾಧಿಕಾರಿ ಪ್ರಶಾಂತ ಕುಮಾ‌ರ್ ಶೆಟ್ಟಿ ಸಹಾಯಕ ಕಾರ್ಯ ನಿರ್ವಾಹಾಧಿಕಾರಿ ಪುಷ್ಪಲತಾ, ದೇವಳದ ವ್ಯವಸ್ಥಾಪನಾ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ ಡಾ. ಅತುಲ್‌ಕುಮಾರ್   ರತ್ನಾ ರಮೇಶ್ ಕುಂದರ್, ದೇವಳದ ಅರ್ಚಕ ನಾರ್ಸಿ ಗೋವಿಂದ ಅಡಿಗ, ಕೆ. ಎನ್. ಸುಬ್ರಹ್ಮಣ್ಯ ಅಡಿಗ ಮತ್ತಿತರರು ಇದ್ದರು.

ಮಾ.26ರಂದು ಮಾಂಗಲೋತ್ಸವ, ಮಯೂರಾರೋಹಣೋತ್ಸವ, ಮಾ.27ರಂದು ಮಾಂಗಲೋತ್ಸವ, ಡೋಲಾರೋಹಣೋತ್ಸವ, ಮಾ.28ರಂದು ಮಾಂಗಲೋತ್ಸವ, ಪುಷ್ಪ ಮಂಟಪಾರೋಹಣೋತ್ಸವ, ಮಾ.29ರಂದು ಮಾಂಗಲೋತ್ಸವ, ವೃಷಭಾರೋಹಣೋತ್ಸವ, ಮಾ.30ರಂದು ಗಜಾರೋಹಣೋತ್ಸವ, ಮಾಂಗಲೋತ್ಸವ, ಮಾ.31ರಂದು ಮಾಂಗಲೋತ್ಸವ, ಹಿರೇರಂಗಪೂಜೆ, ಸಿಂಹಾರೋಹಣೋತ್ಸವ, ಏ. 1ರಂದು ಬೆಳಿಗ್ಗೆ ಮುಹೂರ್ತ ಬಲಿ, ಕ್ಷಿಪ್ರಬಲಿ, ರಥಬಲಿ ನಂತರ ಮಧ್ಯಾಹ್ನ 11.30ಕ್ಕೆ ಮಿಥುನ ಲಗ್ನ ಮುಹೂರ್ತದಲ್ಲಿ ರಥಾರೋಹಣ ಹಾಗೂ ಸಂಜೆ ಶ್ರೀ ಮನ್ಮಹಾರಥೋತ್ಸವ ಜರುಗಲಿದೆ

ಏ.2ರ ರಾತ್ರಿ ಓಕುಳಿ, ಅವತಸ್ನಾನಾದಿ ಕರ್ಮಗಳು ನಡೆಯಲಿದ್ದು, ಬೆಳಿಗ್ಗೆ ಅಶ್ವಾರೋಹಣೋತ್ಸವದ ಬಳಿಕ ಮಹಾಪುರ್ಣಾಹುತಿ, ಧ್ವಜಾಅವರೋಹಣ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆಯಾಗಲಿದೆ. ಅಲ್ಲದೇ ಜಾತ್ರಾ ಅವಧಿಯ ಆರು ದಿನ ಪ್ರತಿಸಂಜೆ 5ಕ್ಕೆ ಮಾಂಗಲೋತ್ಸವ (ಕಟ್ಟೆ ಉತ್ಸವ) ನಡೆಯಲಿದೆ.

ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಲಾಗಿದೆ. ಭಕ್ತರು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ದೇವಳದ ಆಡಳಿತ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

   

Related Articles

error: Content is protected !!