ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಎಜೆ ಆಸ್ಪತ್ರೆ, ಮಂಗಳೂರು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು, ಇವರ ಸಹಯೋಗದೊಂದಿಗೆ ಆಲೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿವಂಗತ ವೆಂಕಮ್ಮ ನಾರಾಯಣ ದೇವಾಡಿಗ ಆಲೂರು ಇವರ ಪ್ರಥಮ ಪುಣ್ಯತಿಥಿ ಅಂಗವಾಗಿ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು ಸಮಾರಂಭವನ್ನು ಊರಿನ ಹಿರಿಯರಾದ ಕುಪ್ಪಯ್ಯಶೆಟ್ಟಿ ಹಾಗೂ ವನೆನ್ಸಿಯಸ್ ಪಿರೇರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ,ಎಜೆ ಆಸ್ಪತ್ರೆಯ ವೈದ್ಯರಾದ ಡಾ. ಜೋಶಿ, ಆಳ್ವ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಗೋಪಾಲ್, ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಲಕ್ಷ್ಮಿ, ಉಪಾಧ್ಯಕ್ಷರಾದ ರವಿಶೆಟ್ಟಿ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರ್ಕೂರು ಮಂಜಯ್ಯ ಶೆಟ್ಟಿ ,ಊರಿನ ಪ್ರಮುಖರಾದ ಸಂಜೀವ ಪೂಜಾರಿ, ಮಹಾಬಲ ಜೋಯಿಸ ಮುಂಬೈ ಉದ್ಯಮಿ ರಾಮಕೃಷ್ಣ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರಾದ ರಘುರಾಮ ದೇವಾಡಿಗ ಆಲೂರು ಪ್ರಾಸ್ತಾವಿಕ ಮಾತನಾಡಿದರು ಆಲೂರು ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಪ್ರಭು ಕೆನಡಿ ಪಿರೇರ ವಂದಿಸಿದರು. 300ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನವನ್ನು ಪಡೆದರು ಉಚಿತವಾಗಿ ಔಷಧವನ್ನು ವಿತರಿಸಲಾಯಿತು