ಅರಕಲಗೂಡು: ಪ್ರಧಾನಿ ಮೋದಿ ವಿರುದ್ಧ ಸಣ್ಣತನದಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಜ್ಞಾಹೀನ ಮುಖ್ಯಮಂತ್ರಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಟೀಕಿಸಿದರು.
ಪಟ್ಟಣದಲ್ಲಿ ಜೆಡಿಎಸ್ ಕಾರ್ ಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೈಸೂ ರಿನಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಿರುದ್ಧಹಗುರವಾಗಿ ಮಾತನಾಡಿ ದ್ದಾರೆ. ಅವರೊಬ್ಬ ಪ್ರಜ್ಞಾಹೀನ ಮುಖ್ಯಮಂತ್ರಿ ಇಲ್ಲ ವಾದರೆ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಲಯ ದಲ್ಲಿ ದಾವೇ ಹೂಡುತ್ತಿರಲಿಲ್ಲ ಎಂದರು.
ಇವರ ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲಎಂದು ಕೇಂದ್ರ ಸರ್ಕಾರ ಕಡೆ ಬೊಟ್ಟು ಮಾಡು ತ್ತಿರುವುದು ಸರಿಯಲ್ಲ ಇವರು ಸಹ ಹಣಕಾಸು ಮಂತ್ರಿಯಾಗಿದ್ದರು. ಅದನ್ನು ಮರೆತು ಕೇಂದ್ರ ಸರ್ಕಾರದ ಅರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸದೆ ನ್ಯಾಯಲಯದಲ್ಲಿ ದಾವೆ ಹೂಡಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದರು. ಆರುವತ್ತು ವರ್ಷಗಳ ರಾಜಕೀಯ ಹೋರಾಟ ನಡೆಸಿ ಜನಸೇವೆ ಮಾಡಿಕೊಂಡು ಬರುತ್ತಿರುವ ದೇವೇಗೌಡನಿಗೆ ಜೆಡಿಎಸ್ ಎಲ್ಲಿ ಎಂದು ಕೇಳುವ ಸಿದ್ದರಾಮಯ್ಯ ಒಮ್ಮೆ ಮನಸ್ಸಾಕ್ಷಿಯನ್ನು ಕೇಳಿಕೊಳ್ಳಲಿ. 28 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ ದ್ವಿಗುಣವಾಗಿದ್ದು ಪಕ್ಷದಲ್ಲಿ ಲೋಕಸಭಾ ಚುನಾವಣೆಗೆ ಆಸಕ್ತಿ ತೋರುವ ಅಭ್ಯರ್ಥಿ ಇಲ್ಲದೇ ಇರುವ ಕಾರಣ ಮೂರು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿ ಸಲಾಗುತ್ತಿದೆ ಎಂದರು.