ಮೈಸೂರು : ಇಷ್ಟು ದಿನ ನನಗೆ ಏನು ಸಿಕ್ಕಿರಲಿಲ್ಲವೋ ಅದು 15 ದಿನಗಳಿಂದ ಸಿಗುತ್ತಿದೆ ಎಂದು ಮೈಸೂರು-ಕೊಡಗು, ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ದಿನ ನಾನು ಜನಸಾಮಾನ್ಯರ ಜೊತೆ ಬೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಜನಸಾ ಮಾನ್ಯರನ್ನು ಭೇಟಿ ಮಾಡುತ್ತಿದ್ದೇನೆ. ಜನ ಕೂಡ ಪ್ರೀತಿ, ಅಭಿಮಾನದಿಂದ ಕಾಣುತ್ತಿ ದ್ದಾರೆ ಎಂದರು.
ನಾನೂ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಇದು ಸಂತಸ ತಂದಿದೆ. ಈವರೆಗೆ ನನಗೆ ಏನು ಸಿಕ್ಕಿರಲಿಲ್ಲವೋ ಅದು 15 ದಿನಗಳಿಂದ ಸಿಗುತ್ತಿದೆ. ಜನ ತೋರುತ್ತಿರುವ ಕಾಳಜಿಗೆ ನಾನು ಅಬಾರಿ. ನಾನು ಮುಂದೆಯೂ ಇದೇ ರೀತಿ ಜನರ ಜೊತೆ ಇರುತ್ತೇನೆ ಎಂದು ಅವರು ಹೇಳಿದರು.