ಕುಂದಾಪುರ : ನಗರದ ಫಿಶ್ ಮಾರ್ಕೇಟ್ ರಸ್ತೆಯ ನಿವಾಸಿ ದಿ. ಬಾಬಾ ಆಚಾರ್ ರವರ ಪುತ್ರನಾದ ಸುಧಾಕರ್ ಆಚಾರ್ ರವರು ನಿನ್ನೆ ರಾತ್ರಿ ನಿಧನ ಹೊಂದಿದರು ಅವರಿಗೆ 63 ವರ್ಷ ವಯಸ್ಸಾಗಿತ್ತು
ನಗರದ ಮುಖ್ಯ ರಸ್ತೆಯಲ್ಲಿರುವ ಕಾಳಿಕಾಂಬ ಇಂಜೀನಿಯರಿಂಗ್ ವರ್ಕ್ಸ್ ಇದರ ಮಾಲಕರಾಗಿರುವ ಅವರು ಸ್ಕೂಟರ್ ಬೈಕ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸೇರಿದ ಪಂಪ್ ಸೆಟ್ ಹಾಗೂ ಜನರೇಟರ್ಗಳ ರಿಪೇರಿಯಲ್ಲಿ ನುರಿತ ಜ್ಞಾನ ಹೊಂದಿದ್ದರು
ಒಂದು ವಾರದ ಹಿಂದೆ ತೀವ್ರ ಅಸ್ವಸ್ಥಗೊಂಡ ಅವರನ್ನು ಮಣಿಪಾಲದ ಕೆ ಎಂ ಸಿ ಅಸ್ಪತ್ರೆಗೆ ದಾಖಲಿಸಲಾಗಿತ್ತು ಆಗ ಅವರು ಕೋಮಾಕ್ಕೆ ಜಾರಿದ್ದರು ನಿನ್ನೆ ರಾತ್ರಿಯ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ
ಅವರು ಪತ್ನಿ ಹಾಗೂ ಇಬ್ಬರು ಪುತ್ರರು ಸಹೋದರರು ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ