ವಿಜಯಪುರ : ರಾಜ್ಯದ ಲಕ್ಷಾಂತರ ಮಂದಿಯ ಪ್ರಾರ್ಥನೆ ಕೊನೆಗೂ ಫಲಿಸಿದೆ. ಅನ್ನಾಹಾರವಿಲ್ಲದೆ ಕೊಳವೆಬಾವಿಯಲ್ಲಿ 16 ರಿಂದ 18 ಅಡಿ ಆಳದಲ್ಲಿ ತಲೆಕೆಳಗಾಗಿ ಸಿಲುಕಿದ್ದ ಇಂಡಿ ತಾಲೂಕಿನ ಲಚ್ಯಾಣದ 2 ವರ್ಷದ ಬಾಲಕ ಸಾತ್ವಿಕ್ ಕೊನೆಗೂ ಪವಾಡದ ರೀತಿಯಲ್ಲಿ ಬದುಕಿ ಬಂದಿದ್ದಾನೆ. ಸತತ 20 ಗಂಟೆಗಳ ಕಾರ್ಯಾಚರಣೆ ಮೂಲಕ ಸಾತ್ವಿಕ್‌ನನ್ನು ಜೀವಂತವಾಗಿ ಮೇಲೆತ್ತುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬೋರ್‌ವೆಲ್‌ನಿಂದ ಮೇಲೆತ್ತಿದ ಕೂಡಲೇ ತಕ್ಷಣ ಅಲ್ಲೇ ಸಿದ್ಧವಾಗಿ ನಿಂತಿದ್ದ ಆಂಬ್ಯುಲೆನ್ಸ್ ಮೂಲಕ ಮಗುವನ್ನು ಇಂಡಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ. ಸಹಜವಾಗಿ ಉಸಿರಾಡುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ
ಮರು ನಾಮಕರಣ :
ಸಾತ್ವಿಕ್‌ಗೆ ಸಿದ್ದಲಿಂಗ ಎಂದು ಹೆಸರು
ಮಗ ಸಾತ್ವಿಕ ಊಟ ಮಾಡದೆ 15 ಗಂಟೆಯಾಯಿತು. ಮಗು ಜೀವಂತವಾಗಿ ಮೇಲೆ ಬಂದರೆ ಆತನ ಹೆಸರನ್ನು ಸಿದ್ದಲಿಂಗ ಎಂದು ಮರು ನಾಮಕರಣ ಮಾಡುತ್ತೇನೆಂದು ಹರಕೆ ಹೊತ್ತು ತಂದೆ-ತಾಯಿ ಪ್ರಾರ್ಥಿಸಿದ್ದರು. ಅದರಂತೆ ಸಾತ್ವಿಕ್ ಬದುಕಿ ಬಂದಿದ್ದರಿಂದ ಸಾತ್ವಿಕ್‌ಗೆ ಈಗ ಸಿದ್ದಲಿಂಗ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದ್ದಾರೆ.