Home » ಇದು ನವಭಾರತ – ಪ್ರಧಾನಿ ಮೋದಿ
 

ಇದು ನವಭಾರತ – ಪ್ರಧಾನಿ ಮೋದಿ

by Kundapur Xpress
Spread the love

ಜೈಪುರ: ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಶತ್ರುಗಳ ವಿರುದ್ಧ ಕ್ರಮ ಕೈಗೊಳ್ಳಲೂ ನಮ್ಮ ಯೋಧರಿಗೆ ಅವಕಾಶ ನೀಡುತ್ತಿರಲಿಲ್ಲ. ಅವರ ಕೈ ಕಟ್ಟಿ ಹಾಕಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಭಾರತವನ್ನು ಕೆಣಕಿದರೆ ಅವರು ದೇಶಗಳಗೆ ನುಗ್ಗಿ ಹೊಡಿತಾರೆ. ಏಕೆಂದರೆ ಇದು ನವಭಾರತ ಎಂಬುದು ಇದೀಗ ಶತ್ರುಗಳಿಗೂ ಗೊತ್ತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಪಾಕ್‌ನಲ್ಲಿ ಉಗ್ರರ ನಿಗೂಢ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಬ್ರಿಟನ್ ಪತ್ರಿಕೆ ವರದಿ ಮತ್ತು ಭಾರತದ ಬಾಲಾಕೋಟ್ ದಾಳಿಯನ್ನು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನ ಮತ್ತು ಕಾಂಗ್ರೆಸ್ ಎರಡನ್ನೂ ಗುರಿಯಾಗಿಸಿ ಪ್ರಧಾನಿ ಮೋದಿ ಈ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ರಾಜಸ್ತಾನದ ಚುರುವಿನಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಗ್ರರು ನಮ್ಮ ದೇಶದೊಳಗೆ ನುಗ್ಗಿ ದಾಳಿ ನಡೆಸಿ ಪರಾರಿಯಾಗುತ್ತಿದ್ದರು. ಅವರ ವಿರುದ್ಧ ಪ್ರತಿದಾಳಿ ನಡೆಸಲೂ ನಮ್ಮ ಯೋಧರಿಗೆ ಸರ್ಕಾರ ಅವಕಾಶ ನೀಡುತ್ತಿರಲಿಲ್ಲ. ನಮ್ಮ ಯೋಧರು ಒಂದು ರ್ಯಾಂಕ್, ಒಂದು ಪಿಂಚಣಿಗೆ ಮನವಿ ಮಾಡಿದರೂ ಸರ್ಕಾರ ಆ ಬಗ್ಗೆ ಗಮನ ಹರಿಸಲಿಲ್ಲ. ಆದರೆ ನಮ್ಮ ಸರ್ಕಾರ ಬರುತ್ತಲೇ, ಗಡಿಯಲ್ಲಿ ಶತ್ರುಗಳಿಗೆ ಸೂಕ್ತ ಎದಿರೇಟು ನೀಡಲು ನಮ್ಮ ಯೋಧರಿಗೆ ಮುಕ್ತ ಅವಕಾಶ ಕಲ್ಪಿಸಲಾಯಿತು. ಹೀಗಾಗಿ ಇಂದು ಶತ್ರುಗಳು ಕೂಡಾ, ‘ಇದು ಮೋದಿ ಯುಗ; ಇದು ಶತ್ರು ದೇಶದ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆಬಡಿಯುವ ನವಭಾರತ’ ಎಂದು ಕಂಡುಕೊಂಡಿದ್ದಾರೆ ಎಂದು ಹೇಳಿದರು.

   

Related Articles

error: Content is protected !!