Home » ಸಂಹಿತೆ ಉಲ್ಲಂಘನೆ : ಕೋಟಗೆ ಸಮನ್ಸ್
 

ಸಂಹಿತೆ ಉಲ್ಲಂಘನೆ : ಕೋಟಗೆ ಸಮನ್ಸ್

by Kundapur Xpress
Spread the love

ಬೆಂಗಳೂರು :  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ಚುನಾವಣಾ ಸಿಬ್ಬಂದಿ ದಾಖಲಿಸಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಕೋಟ ಶ್ರೀನಿವಾಸ ಪೂಜಾರಿ ಜತೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಕ್ಷದ ಮುಖಂಡ ಲಾಲಾಜಿ ಆ‌ರ್. ಮೆಂಡನ್ ಅವರಿಗೂ ಸಮನ್ ಜಾರಿ ಮಾಡಲಾಗಿದ್ದು, ಬರುವ ಮೇ 27ರಂದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ. ಮಾ. 30ರಂದು ಕಟಪಾಡಿ ಖಾಸಗಿ ಕಾಲೇಜು ಆವರಣದಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೇ ಪ್ರಚಾರ ಸಭೆ ಮಾಡಿದ್ದರು. ಚುನಾವಣೆ ಸಿಬ್ಬಂದಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದರು.

   

Related Articles

error: Content is protected !!