ಕುಂದಾಪುರ : ತಲ್ಲೂರು ಗರಡಿ ಸಮೀಪದ ನಿವಾಸಿಯಾದ ಶೇಖರ್ ಪೂಜಾರಿ ಯಾನೆ ಚಂದ್ರಶೇಖರ್ ಪೂಜಾರಿಯವರು ಇಂದು ಶನಿವಾರ ಸಂಜೆ ಮೃತಪಟ್ಟಿದ್ದಾರೆ ಕೇಬಲ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ 52 ವರ್ಷ ವಯಸ್ಸಾಗಿತ್ತು
ಕಳೆದ ಭಾನುವಾರ ಮಧ್ಯಾಹ್ನ ತಲ್ಲೂರು ಸರ್ಕಲ್ ಬಳಿ ಅವರ ಸ್ಕೂಟರಿಗೆ ಮಿನಿ ಬಸ್ಸೊಂದು ಢಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆಯ ವೇಳೆಗೆ ಅವರು ನಿಧನ ಹೊಂದಿದರು ಅವರು ಪತ್ನಿ ಹಾಗೂ ಇಬ್ಬರು ಪುತ್ತಿಯರನ್ನು ಅಗಲಿದ್ದಾರೆ