Home » ಶಬರಿ ಕೊಳ
 

ಶಬರಿ ಕೊಳ

by Kundapur Xpress
Spread the love

ಶಬರಿ ಕೊಳ- ಇದು ಶ್ರೀರಾಮನು ಶಬರಿಗೆ ದರ್ಶನ ಕೊಟ್ಟಂತಹ ಮಹಾ ಪವಿತ್ರ ಸ್ಥಳ

ಕಾದಿರುವಳು ಶಬರಿ ರಾಮ ಬರುವೆನೆಂದು ಈ ಕವಿತೆ ಎಲ್ಲರ ಮನದಲ್ಲೂ ಸದಾ ಉಳಿದುಕೊಳ್ಳುವಂಥ ಒಂದು ಅದ್ಭುತ ಕವಿತೆ . ಬೇಡರ ಕುಟುಂಬ ಒಂದರಲ್ಲಿ ಜನ್ಮ ತಾಳಿದಂತಹ ಶಬರಿ ತನ್ನ ಕುಟುಂಬವನ್ನು ಪರಿತ್ಯಾಗ ಮಾಡಿ ಗುರುವನ್ನು ಅರಸಿಕೊಂಡು ರಿಷ್ಯ ಮೂಕ ಪರ್ವತಕ್ಕೆ ಹೋದಾಗ ಮಾತಂಗ ಋಷಿಗಳ ಭೇಟಿಯಾಗುತ್ತದೆ . ಮಾತಂಗ ಋಷಿಗಳನ್ನೇ ತನ್ನ ಗುರುವೆಂದು ಭಾವಿಸಿ ಅನೇಕ ವರ್ಷಗಳ ಕಾಲ ಗುರುವಿನ ಸೇವೆಯಲ್ಲಿ ಶಬರಿಯು ತೊಡಗುತ್ತಾಳೆ .

ಅನೇಕ ವರ್ಷಗಳು ಕಳೆದಾಗ ಮಾತಂಗ ಋಷಿಗಳು ತನ್ನ ದೇಹ ತ್ಯಾಗ ಮಾಡುವ ಸಂದರ್ಭ ಬಂದಾಗ ಶಬರಿಯಲ್ಲಿ ಒಂದು ಮಾತನ್ನು ಹೇಳುತ್ತಾರೆ . ನಿನಗೆ ಮೋಕ್ಷ ಕೊಡಲು ಸ್ವತಃ ಶ್ರೀರಾಮನೇ ಈ ಪರ್ವತಕ್ಕೆ ಲಕ್ಷ್ಮಣನೊಡಗೂಡಿ ಬರುತ್ತಾನೆ ಎಂದು ಹೇಳಿ ತನ್ನ ದೇಹ ತ್ಯಾಗ ಮಾಡುತ್ತಾರೆ . ಅತ್ಯಂತ ಸೊರಗಿದ ದೇಹ ಊರು ಗೋಲಿನ ಸಹಾಯದಿಂದ ನಡೆಯುತ್ತಾ ತನ್ನ ನಿತ್ಯ ಕರ್ಮಗಳನ್ನು ಮಾಡುತ್ತಾ
ಶ್ರೀ ರಾಮನ ಆಗಮನವನ್ನು ನಿರೀಕ್ಷಿಸುತ್ತಾ ಅನುದಿನವು ತನ್ನ ಸ್ವಾಮಿ ಇವತ್ತು ಬಂದಾನೋ ನಾಳೆ ಬಂದಾನೋ ಇದೇ ಭಾವದಿಂದ
ರಾಮ ನಾಮವನ್ನು ಜಪಿಸುತ್ತಾ ರಾಮ ಬಂದಾಗ ಆತನಿಗೆ ಕೊಡಲು ಸಿಹಿಯಾದ ಹಣ್ಣುಗಳನ್ನು ಸಂಗ್ರಹಿಸುತ್ತಾ ಕಾಲವನ್ನು ಕಳೆಯುತ್ತಿರುತ್ತಾಳೆ . ರಾಮ ಬರುವ ಹಾದಿಯಲ್ಲಿ ಕಲ್ಲು ಮುಳ್ಳು ಇರಬಾರದೆಂದು ಹಾದಿಯನ್ನು ಸ್ವಚ್ಛಗೊಳಿಸಿ ಮನಸ್ಸಿನಲ್ಲಿ ಪೂಜ್ಯ ಭಾವದಿಂದ ರಾಮ ನಾಮ ಜಪಿಸುತ್ತ ಅನುದಿನವು ದಿನಚರಿ ರಾಮನ ನೆನಪಲ್ಲಿ ನಡೆಸುತ್ತಿರುತ್ತಾಳೆ. ಕಾಲಕ್ರಮೇಣ ರಾಮ ಮತ್ತು ಲಕ್ಷ್ಮಣ ಸೀತಾನ್ವೇಷಣೆಗಾಗಿ ಶಬರಿಯ ಆಶ್ರಮದ ದಾರಿಯಲ್ಲಿ ಬಂದಾಗ ಶಬರಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ತನ್ನ ಸ್ವಾಮಿಯ ಪಾದಪೂಜೆ ಮಾಡಿ ತಾನು ಸಂಗ್ರಹಿಸಿದ ಫಲಗಳನ್ನು ರಾಮನಿಗೆ ಅರ್ಪಿಸುವ ಮುನ್ನ ಒಂದೊಂದೇ ಫಲಗಳನ್ನು ತಾನೇ ಸವಿದು ಕಹಿಯಾದ ಫಲಗಳನ್ನು ಹೊರಗೆ ಎಸೆದು ಸಿಹಿಯಾದ ಫಲಗಳನ್ನು ರಾಮನಿಗೆ ಅರ್ಪಿಸುತ್ತಾಳೆ . ಶಬರಿ ದೇವಾಲಯ ರಾಮಾಯಣ ಕಾಲದ ಘಟನೆಯಿಂದ ಪ್ರಸಿದ್ದಿ ಪಡೆದ ಪವಿತ್ರ ಯಾತ್ರಾ ಸ್ಥಳವೆಂದೇ ಸುಪ್ರಸಿದ್ಧಿ ಪಡೆದ ಪುರಾಣಕ್ಷೇತ್ರವಾಗಿದೆ. ಶಬರಿ ಅವಳ ಸೇವಾಮನೋಭಾವಕ್ಕೆ ಶ್ರೀರಾಮನು ಮೆಚ್ಚುತ್ತಾನೆ.ಸ್ಥಳವೇ ಈಗಿನ ರಾಮದುರ್ಗದಿಂದ 15 ಕಿ.ಮಿ. ಅಂತರದಲ್ಲಿರುವ ಶಬರಿಕೊಳ್ಳದ ಶ್ರೀ ಶಬರಿದೇವಿಯ ದೇವಸ್ಥಾನ. ರಾಮದುರ್ಗವು ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ತಾಲೂಕುಗಳಲ್ಲಿ ಒಂದು, ಈ ಪಟ್ಟಣಕ್ಕೆ ರಾಮನಗರಿ, ಭುಜಬಲಗಡ, ಬೆಲ್ಲದ ನಾಡು, ಕೊಳ್ಳಗಳ ನಾಡು, ಪುರಾಣಕ್ಷೇತ್ರ ಎಂತೆಲ್ಲಾ ಜನರು ಕರೆಯುತ್ತಾರೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಸುರೇಬಾನ ಗ್ರಾಮದ ಈ ಜಲಧಾರೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಸುರೇಬಾನ ಗ್ರಾಮ ಆಧ್ಯಾತ್ಮಿಕ ಹಾಗೂ ಪೌರಾಣಿಕ ಹಿನ್ನೆಲೆಯ ಕ್ಷೇತ್ರ. ಶಬರಿ ರಾಮನಿಗಾಗಿ ಇಲ್ಲೇ ಕಾದಿದ್ದಳಂತೆ. ಹಾಗಾಗಿ ಇದಕ್ಕೆ ಶಬರಿಕೊಳ್ಳ ಎಂಬ ಹೆಸರು.ಸುರೇಬಾನ ಗ್ರಾಮದಿಂದ ಮೂರು ಕಿಮೀ ದೂರದಲ್ಲಿ ಸುಮಾರು 200 ಅಡಿಯಿಂದ ಧುಮ್ಮಿಕ್ಕು ಅಂತರಗಂಗೆಯಿದು. ಶಬರಿ ಕೊಳ್ಳ. ಸುತ್ತಲೂ ಬೆಟ್ಟಗುಡ್ಡ, ನಡುವೆ ಹರಿವ ಜಲಧಾರೆ, ಕಾಡಿನ ನಡುವೆ ಹರಿವ ನೀರಿನ ಶಬ್ದ.. ಒಟ್ಟಿನಲ್ಲಿ ಶಬರಿಕೊಳ್ಳ ಸೌಂದರ್ಯ ಅನನ್ಯ

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ

 

Related Articles

error: Content is protected !!