ನವದೆಹಲಿ : ಶುಕ್ರವಾರ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ 25 ಗ್ಯಾರಂಟಿಗಳುಳ್ಳ ಪ್ರಣಾಳಿಕೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ತರಾಟೆಗೆ ತೆಗೆ ದುಕೊಂಡಿದ್ದಾರೆ. ‘ಇದು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮುಸ್ಲಿಂ ಲೀಗ್ ಹೊಂದಿದ್ದ ಚಿಂತನೆಯನ್ನೇ ಪ್ರತಿಬಿಂಬಿಸುತ್ತದೆ. ಸಮಗ್ರ ಭಾರತದ ಪ್ರತಿಬಿಂಬವೇ ಅದರಲ್ಲಿ ಇಲ್ಲ’ ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಲೀಗ್ ಏನು ಮನಸ್ಥಿತಿ ಹೊಂದಿತ್ತು ಎಂದು ಪ್ರಧಾನಿ ವಿಸ್ತರಿಸಿ ಹೇಳುವ ಗೋಜಿಗೆ ಹೋಗದೇ ಇದ್ದರೂ, ಆಗಿನ ಮುಸ್ಲಿಂ ಲೀಗ್, ಹಿಂದೂಗಳಿಗೆ ಭಾರತ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಪಾಕಿಸ್ತಾನ ರಚನೆಯ ಬೇಡಿಕೆ ಮುಂದಿಟ್ಟಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹೀಗಾಗಿ ಕಾಂಗ್ರೆಸ್ ಪ್ರಣಾಳಿಕೆ ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ರೀತಿಯಲ್ಲಿದೆ ಎಂದು ಮೋದಿ ಪರೋಕ್ಷವಾಗಿ ಹೇಳಿದ್ದಾರೆ