ಉಡುಪಿ : ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಪ್ರಜಾಪ್ರಭುತ್ವದ ಸಂಭ್ರಮದಲ್ಲಿ ನೈತಿಕ ಮತದಾರರಾಗಿ ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ನಡೆಯುವ ಏಪ್ರಿಲ್ 26 ಹಾಗೂ ಮೇ 07 ರಂದು ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ‘ಚುನಾವಣಾ ಪರ್ವ ದೇಶದ ಗರ್ವ’…ಎನ್ನುವ ಸಂದೇಶದೊಂದಿಗೆ ಜನ ಜಾಗೃತಿ ಸಾರುವ ಮರಳು ಶಿಲ್ಪದ ರಚನೆ ‘ಸ್ಯಾಂಡ್ ಥೀಂ’ ಉಡುಪಿ ತಂಡದಿಂದ ಶನಿವಾರ ಮಲ್ಪೆ ಕಡಲ ತೀರದಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಶ್ರೀಮತಿ ಮೀನಾ ನಾಗರಾಜು ಹಾಗೂ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಗೋಪಾಲಕೃಷ್ಣ, ಉಡುಪಿ ಪೆÇೀಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕುಮಾರ್, ಚಿಕ್ಕಮಗಳೂರು ಪೆÇೀಲೀಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆ, ಕರಾವಳಿ ಕಾವಲು ಎಸ್ಪಿ ಮಿಥುನ್, ಡಿಸಿಎಫ್ ಉಡುಪಿ ಗಣಪತಿ, ವೈಲ್ಫ್ಡ್ ಲೈಫ್ ಶಿವರಾಮ್ ಬಾಬು ಹಾಗೂ ‘ಸ್ಯಾಂಡ್ ಥೀಂ’ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಉಪಸ್ಥಿತರಿದ್ದರು