Home » ನಕಲಿ ನೋಟು ವಂಚಕರ ಜಾಲ ಪತ್ತೆ
 

ನಕಲಿ ನೋಟು ವಂಚಕರ ಜಾಲ ಪತ್ತೆ

by Kundapur Xpress
Spread the love

ಬೆಂಗಳೂರು: ನಕಲಿ ನೋಟು ವಂಚಕರ ಜಾಲವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು, 30.91 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಸರಿಯಾದ ಲೆಕ್ಕಪತ್ರಗಳಿಲ್ಲದ 23 ಲಕ್ಷ ರೂಪಾಯಿ ಪತ್ತೆಯಾಗಿದೆ. ಖಾಸಗಿ ಟ್ರಸ್ಟ್‌ಗಳಿಗೆ ಕಾರ್ಪೋರೇಟ್ ಹೊಣೆಗಾರಿಕೆ ನಿಧಿ(ಸಿಎಸ್‌ಆರ್) ಫಂಡ್ ಕೊಡಿಸುವುದಾಗಿ ನಂಬಿಸಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಕಿಶೋರ್, ವಿನಯ್, ಚಂದ್ರಶೇಖರ್ ಅಗ್ರಹಾರ ದಾಸರಹಳ್ಳಿ ನಿವಾಸಿಗಳು. ದೂರುದಾರ ಕೃಷ್ಣಮೂರ್ತಿ ಎಂಬವರಿಗೆ ಸಿಎಸ್ ಆರ್ ಫಂಡ್ ಕೊಡಿಸುವುದಾಗಿ ವಂಚನೆಗೆ ಯತ್ನಿಸಿದ್ದರು. ಅನುಮಾನಗೊಂಡ ಕೃಷ್ಣಮೂರ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 30.91 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 

   

Related Articles

error: Content is protected !!