Home » ಪ್ರತಿ ಊರಿನಲ್ಲಿ ರಾಮನವಮಿ ಉತ್ಸವ ಆಚರಿಸಿ
 

ಪ್ರತಿ ಊರಿನಲ್ಲಿ ರಾಮನವಮಿ ಉತ್ಸವ ಆಚರಿಸಿ

ಪೇಜಾವರ ಶ್ರೀ

by Kundapur Xpress
Spread the love

ಉಡುಪಿ: ಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದ ಉದ್ಘಾಟನೆ ಬಳಿಕ ಮೊದಲ ರಾಮನವಮಿಯಾಗಿದೆ ಇದಾಗಿದೆ. ಆದ್ದರಿಂದ ಪ್ರತೀ ಊರಲ್ಲಿ ರಾಮನವಮೀ ಉತ್ಸವವನ್ನು ವಿಶೇಷವಾಗಿ ಆಚರಿಸುವಂತೆ ರಾಮಜನ್ಮಭೂಮಿತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಕರೆ ನೀಡಿದ್ದಾರೆ.

ಏ.5 ರಂದು ಅಯೋಧ್ಯೆಯಲ್ಲಿ ನಡೆದ ಟ್ರಸ್ ನ ಸಭೆಯಲ್ಲಿ ಶ್ರೀಗಳು ಸೇರಿದಂತೆ ಎಲ್ಲ ಸದಸ್ಯರು ವಿವರವಾಗಿ ಚರ್ಚಿಸಿದ್ದಾರೆ. ಚುನಾವಣಾ ನೀತಿ ಸಂಹಿತೆಗೆ ತೊಂದರೆಯಾಗದಂತೆ ಪ್ರತೀ ಊರಲ್ಲಿರುವ ದೇವಸ್ಥಾನ, ಭಜನಾ ಮಂದಿರ, ಸಮುದಾಯ ಭವನಗಳಲ್ಲಿ ಭಜನೆ, ರಾಮತಾರಕ ಮಂತ್ರ ಜಪ ಯಜ್ಞ ಭಕ್ತರಿಗೆ ಪಾನಕ, ಕೋಸಂಬರಿ ಮೊದಲಾದವುಗಳ ವಿತರಣೆ ಇತ್ಯಾದಿಗಳನ್ನು ಸಾಮೂಹಿಕವಾಗಿ ಆಚರಿಸಬೇಕು.

ಬಡವರಿಗೆ ನೆರವು : ಸಮಾಜದಲ್ಲಿರುವ ಆಶಕ್ತರಿಗಾಗಿ ಸೇವಾಕಾರ್ಯಗಳನ್ನೂ ಸಂಯೋಜಿಸಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಬಡ ರೋಗಿಗಳ ಚಿಕಿತ್ಸಾ ವೆಚ್ಚ ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಊರು ಹಳ್ಳಿಗಳಲ್ಲಿ ಶ್ರಮದಾನಗಳ ಮೂಲಕ ಸ್ವಚ್ಛತಾ ಕಾರ್ಯ, ಕೆರೆಗಳ ಶುದ್ದೀಕರಣ, ಬೇಸಿಗೆಯ ದಿನಗಳಾದ್ದರಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಗೋಶಾಲೆಗಳಿಗೆ ನೆರವು, ಅನಾಥರಿಗೆ ಊಟೋಪಹಾರ ವಿತರಣೆ ಮಾಡಬೇಕು ಎಂದು ಶ್ರೀ ವಿಶ್ವಪ್ರಸನ್ನತೀರ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

Related Articles

error: Content is protected !!