ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿ ಕುಂದಾಪುರ
ಕುಂದಾಪುರ: ಕುಂದಾಪುರ ಸಮೀಪದ ಕೋಡಿ ಚಕ್ರಮ್ಮ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಜಾತ್ರೆಯು ದಿನಾಂಕ ಫೆಬ್ರವರಿ 07 ಮತ್ತು 8ರಂದು ನಡೆಯಲಿದೆ. ಸಂಜೆ ಗಂಟೆ 4 ರಿಂದ ರಾತ್ರಿ 1 ಗಂಟೆಯ ತನಕ ಹಣ್ಣುಕಾಯಿ, ಮಂಗಳಾರತಿ, ಕುಂಕುಮಾರ್ಚನೆ, ಮಹಾಮಂಗಳಾರತಿ, ಹೂವಿನ ಪೂಜೆ ಹಾಗೂ ದೇವಿ ದರ್ಶನದೊಂದಿಗೆ ಗೆಂಡ ತುಳಿಯುವ ಸೇವೆ ನಡೆಯಲಿದೆ.
ಫೆಬ್ರವರಿ 8ರಂದು ಬುಧವಾರ ಬೆಳೆಗ್ಗೆ ಗಂಟೆ 5.30ರಿಂದ 8.30ರ ತನಕ ದರ್ಶನ, ಡಕ್ಕೆ ಮಂಡಲ, ಬಾಳೆಗೊನೆ ಹಾಲು ಸೇವೆ, ಮೈದಾಳಿ ದೇವರಿಗೆ ಸೇವೆಯಾಗಲಿದೆ. ಬೆಳಿಗ್ಗೆ ಗಂಟೆ 8.30 ರಿಂದ ಮಧ್ಯಾಹ್ನ ಗಂಟೆ 12.30ರ ತನಕ ಹಣ್ಣುಕಾಯಿ, ತನುಸೇವೆ, ಹೂವಿನ ಪೂಜೆ, ಮಹಾಮಂಗಳಾರತಿ, ಉಡಿ ತುಂಬಿಸುವ ಸೇವೆ ದೇವಿದರ್ಶನದ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಾರಣಕಟ್ಟೆ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಮೇಲಿನ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ಶ್ರೀ ದೇವಿಯ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕೆಂದು ಅನುವಂಶಿಕ ಮುಕ್ತೇಶರರಾದ ಪಂಜು ಆರ್. ಪೂಜಾರಿ ಹಾಗೂ ದೇವಿ ದರ್ಶನದ ಪಾತ್ರಿಯಾದ ರಾಘವೇಂದ್ರ ಸಿ. ಪೂಜಾರಿಯವರು ವಿನಂತಿಸಿಕೊಂಡಿದ್ದಾರೆ.