Home » ಪೊಲೀಸರಿಂದ  ಮೊಬೈಲ್ ಫೋನ್ ಹಸ್ತಾಂತರ
 

ಪೊಲೀಸರಿಂದ  ಮೊಬೈಲ್ ಫೋನ್ ಹಸ್ತಾಂತರ

by Kundapur Xpress
Spread the love

ಕುಂದಾಪುರ : ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಜ.1 ರಿಂದ ಮಾ.31ರವರೆಗೆ ಸಾರ್ವಜನಿಕರು ಕಳೆದುಕೊಂಡಿರುವ ಒಟ್ಟು 13 ಮೊಬೈಲ್ ಫೋನ್ ಗಳನ್ನು ಸಿಇಐಆರ್ ಪೋರ್ಟ್‌ಲ್ ಮೂಲಕ ಕುಂದಾಪುರ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ  ಮೊಬೈಲ್ ಗಳನ್ನು ಸಂಬಂಧಪಟ್ಟ ಫೋನ್ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈವರೆಗೆ 53 ಮೊಬೈಲ್‌ಗಳನ್ನು ಸಿಐಐಆರ್ ತಂತ್ರಾಂಶದ ಮೂಲಕ ಪತ್ತೆ ಹಚ್ಚಿ ಮೊಬೈಲ್ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ.ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀ ಕ್ಷಕ ಸಿದ್ದಲಿಂಗಪ್ಪ ಹಾಗೂ ಪರಮೇಶ್ವರ ಹೆಗಡೆ ಮತ್ತು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀ ಕ್ಷಕ ಬೆಳ್ಳಿಯಪ್ಪ ನಿರ್ದೇಶನದಂತೆ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಯು.ಬಿ. ನಂದಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣೆಯ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಪ್ರಸಾದ್ ಕುಮಾರ್ ಕೆ. ಹಾಗೂ ಸಿಬ್ಬಂದಿಗಳಾದ ಸಿದ್ದಪ್ಪ ಸಕನಳ್ಳಿ. ಮಾರುತಿ ನಾಯ್ಕ, ತಾಂತ್ರಿಕ ಸಿಬ್ಬಂದಿ ಅಶ್ವಿನ್ ಕುಮಾರ್ ಪಾಲ್ಗೊಂಡಿದ್ದರು.

ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ವಿವರವನ್ನು ಸಿಇಐಆರ್ ಪೋರ್ಟ್‌ಲ್‌ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರಿಗೆ ಮೊಬೈಲ್ ಪತ್ತೆ ಮಾಡಲು ಅನುಕೂಲ ವಾಗುತ್ತದೆ. ಅಲ್ಲದೆ ಮೊಬೈಲ್ ಫೋನ್ನ ದುರ್ಬಳಕೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮೊಬೈಲ್ ಫೋನ್ ಗಳ ವಿವರಗಳನ್ನು ಸಿಇಆರ್‌ಐ ಪೋರ್ಟ್‌ಲ್‌ನಲ್ಲಿ ದಾಖಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ತಿಳಿಸಿದ್ದಾರೆ

   

Related Articles

error: Content is protected !!