Home » ಪುತ್ತಿಗೆ ಶ್ರೀಗಳ ಸನ್ಯಾಸ ಜೀವನಕ್ಕೆ 50 ವಸಂತಗಳು
 

ಪುತ್ತಿಗೆ ಶ್ರೀಗಳ ಸನ್ಯಾಸ ಜೀವನಕ್ಕೆ 50 ವಸಂತಗಳು

by Kundapur Xpress
Spread the love

ಉಡುಪಿ : 1974 ಏಪ್ರಿಲ್ 8 ರಂದು ತಮ್ಮ 12ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ ಪೀಠಾಧಿಪತಿಗಳಾದ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರ ಸನ್ಯಾಸ ಜೀವನಕ್ಕೆ 50  ವಸಂತಗಳು ಪೂರ್ಣಗೊಳ್ಳುತ್ತವೆ. ಈ ವಿಶೇಷ ಸಂದರ್ಭವನ್ನು ಶ್ರೀಗಳ ಶಿಷ್ಯ ಹಾಗೂ ಅಭಿಮಾನಿ ವೃಂದವು ಏಪ್ರಿಲ್ 14 ರ ಸೌರಮಾನ ಯುಗಾದಿಯಂದು ಸಂಜೆ 5 ಗಂಟೆಗೆ ಮೆರವಣಿಗೆಯಲ್ಲಿ ಶ್ರೀಗಳನ್ನು ರಾಜಾಂಗಣಕ್ಕೆ ಕರೆತಂದು ಭಕ್ತರು-ಶಿಷ್ಯರು ಮತ್ತು ವಿವಿಧ ಸಂಘಟನೆ’ ಗಳಿಂದ ಕೃಷ್ಣನಿಗೆ ಸುವರ್ಣ ನಾಣ್ಯಗಳಿಂದ ಅಭಿಷೇಕ ಮತ್ತು ಸಂಜೆ 4.00 ಗಂಟೆಯಿಂದ 7.00 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ತಮ್ಮ ಸುವರ್ಣ ಸನ್ಯಾಸದ ಈ ವಿಶೇಷ ಸಂದರ್ಭವನ್ನು ಸ್ಮರಣೀಯ ವನ್ನಾಗಿಸಲು ಹಾಗೂ ತಮ್ಮ ಚತುರ್ಥ ಪರ್ಯಾಯವಾದ ‘ವಿಶ್ವಗೀತಾ ಪರ್ಯಾಯ’ದ ವಿಶ್ವವ್ಯಾಪಿ ಯೋಜನೆ ‘ಕೋಟಿಗೀತಾ ಲೇಖನ  ಯಜ್ಞ’ದ ಸ್ಮರಣಾರ್ಥವಾಗಿ ಶ್ರೀಗಳು  ಉಡುಪಿ ಶ್ರೀಕೃಷ್ಣನಿಗೆ ಅಪೂರ್ವವಾದ ‘ಪಾರ್ಥಸಾರಥಿ ಸುವರ್ಣ ರಥ’ವೆಂಬ 1 ಚಿನ್ನದ ರಥವನ್ನು ಸುಮಾರು 18 ಕೋಟಿ ವೆಚ್ಚದಲ್ಲಿ ಸಮರ್ಪಿಸಲು ಸಂಕಲ್ಪಿ ಸಿದ್ದಾರೆ. ಈ ಯೋಜನೆಯ ಪ್ರಾರಂಭ ಮುಹೂರ್ತವನ್ನು ನಡೆಸಲಾಗುವುದು.

ಮಾಹೆ ಸಹಕುಲಾಧಿಪತಿಗಳು ಮತ್ತು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಹೆಚ್.ಎಸ್ ಬಲ್ಲಾಳ್‌, ಎಲ್.ಐ.ಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮುಧೋಳ್, ಯು.ಪಿ.ಸಿ.ಎಲ್. ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಕಿಶೋರ್ ಆಳ್ವ ಕರಾವಳಿ ಗ್ರೂಪ್ ಆಫ್ ಕಾಲೇಜ್‌ನ ನಿರ್ದೆಶಕ ಗಣೇಶ್ ರಾವ್, ಉಡುಪಿ ನಂದಿಕೂರಿನ ಪ್ರಾಜ್ ಇಂಡಸ್ಟ್ರೀಸ್‌ನ ಅಶೋಕ್ ಶೆಟ್ಟಿ ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ಕೇಂಜ ಶ್ರೀಧರ ತಂತ್ರಿ, ಬ್ರಹ್ಮಾವರ ರೋಟರಿಯ ನಿಯೋಜಿತ ಗವರ್ನರ್ ໖.໑໐. ಭಟ್, ಆಕ್ಸಿಸ್ ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ್ ರಾವ್, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನದ ಪ್ರಕಾಶ್ ಚಂದ್ರ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

ಗಣ್ಯರಿಂದ 108 ಚಿನ್ನದ ನಾಣ್ಯಗಳ ಸಮರ್ಪಣೆ ಹಾಗೂ ಶ್ರೀಗಳವರಿಗೆ ಪುಷ್ಪಾರ್ಚನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಸೌರಮಾನ ಯುಗಾದಿಯ ನೂತನ ಕ್ರೋಧಿ ಸಂವತ್ಸರದ ಶುಭ ಸಂದೇಶವನ್ನು ಪೂಜ್ಯ ಪರ್ಯಾಯ ಸ್ವಾಮಿಗಳು ನೀಡುವರು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದೆ.

   

Related Articles

error: Content is protected !!