ಕೋಟ:ಪ್ರಸ್ತುತ ಯುವ ಸಮುದಾಯದಲ್ಲಿ ಸಂಸ್ಕಾರ ನೀಡುವ ಅಗತ್ಯತೆ ಇದೆ ಈ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿ ಭಜನಾ ಸಂಸ್ಕಾರ ನೀಡಿ ಎಂದು ನಾಡೋಜ ಡಾ.ಜಿ.ಶಂಕರ್ ಕರೆ ನೀಡಿದರು.
ಕೋಡಿ ಕನ್ಯಾಣದ ಮಹಾಸತೀಶ್ವರಿ ದೇಗುಲದ ವಠಾರದಲ್ಲಿ ಪ್ರಗತಿ ಯುವಕ ಸಂಘ ಕೋಡಿ ಕನ್ಯಾಣ ಇದರ ತ್ರೀಂಶತಿ ಮಹೋತ್ಸವದ ಪ್ರಗತಿ ಪಥ ಶೀರ್ಷಿಕೆಯಡಿ ಭಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಿಂದಿನ ಕಾಲಘಟ್ಟದಲ್ಲಿ ಹಸಿವು ಆವರಿಸಿದರೂ ಭಜನಾ ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು ಅದರಿಂದಲೆ ನೈಜ ಜೀವನ ಕಾಣಲು ಸಾಧ್ಯವಾಗಿದೆ ಸಂಘಸಂಸ್ಥೆಗಳ ಭಜನಾ ಸಂಕೀರ್ತನೆಗೆ ಹೆಚ್ಚಿನ ಒತ್ತು ನೀಡುವಂತ್ತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಭಜನೆ,ಶನೀಶ್ವರ ಕಥಾಶ್ರವಣಕಾರರಾದ ಸಂಜೀವ ಪೂಜಾರಿ ಕೋಡಿ,ಚಂದ್ರಶೇಖರ್ ಅಮೀನ್,ಅಣ್ಣಪ್ಪ ಸಾಲಿಯಾನ್ ಪರವಾಗಿ ದೇವಕಿ ಮೆಂಡನ್ ಇವರುಗಳನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರಗತಿ ಯುವಕ ಸಂಘದ ಅಧ್ಯಕ್ಷ ಜಗನಾಥ್ ಅಮೀನ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಜಯಂತ್ ಅಮೀನ್,ಉದ್ಯಮಿ ನರಸಿಂಹ ಪೂಜಾರಿ,ಕಟೀಲು ಶ್ರೀ ದುರ್ಗಾಪರಮೇಶ್ವರಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ ಕೃಷ್ಣ ಕಾಂಚನ್, ಸಂಘದ ಪ್ರಮುಖರಾದ ಪ್ರಭಾಕರ ಮೆಂಡನ್,ಉದಯ್ ತಿಂಗಳಾಯ ಉಪಸ್ಥಿತರಿದ್ದರು. ಸಂಘದ ತ್ರೀಂಶತಿ ಮಹೋತ್ಸವದ ಅಧ್ಯಕ್ಷ ಸಂತೋಷ್ ಅಮೀನ್ ಪ್ರಾಸ್ತಾವನೆ ಸಲ್ಲಿಸಿದರು. ಶ್ರೀ ಮಹಾಸತೀಶ್ವರಿ ದೇಗುಲದ ಅಧ್ಯಕ್ಷ ದೇವದಾಸ್ ಸಾಲಿಯಾನ್ ಶುಭಾಶಂಶನೆಗೈದರು.ಸಂಘದ ಕಾರ್ಯದರ್ಶಿ ಪ್ರವೀಣ್ ಕಾಂಚನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಂಜುನಾಥ ಹಿಲಿಯಾಣ ನಿರೂಪಿಸಿದರು. ನಂತರ ರಾಜ್ಯ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ತಂಡದಿಂದ ಭಜನಾ ಕುಣಿತ ಭಜನಾ ಸ್ಪರ್ಧೆ ಸಂಪನ್ನಗೊಂಡಿತು.
ಕೋಡಿ ಕನ್ಯಾಣದ ಮಹಾಸತೀಶ್ವರಿ ದೇಗುಲದ ವಠಾರದಲ್ಲಿ ಪ್ರಗತಿ ಯುವಕ ಸಂಘ ಕೋಡಿ ಕನ್ಯಾಣ ಇದರ ತ್ರೀಂಶತಿ ಮಹೋತ್ಸವದ ಪ್ರಗತಿ ಪಥ ಶೀರ್ಷಿಕೆಯಡಿ ಭಜನೋತ್ಸವ ಕಾರ್ಯಕ್ರಮವನ್ನುನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಿದರು. ಪ್ರಗತಿ ಯುವಕ ಸಂಘದ ಅಧ್ಯಕ್ಷ ಜಗನಾಥ್ ಅಮೀನ್, ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಜಯಂತ್ ಅಮೀನ್,ಉದ್ಯಮಿ ನರಸಿಂಹ ಪೂಜಾರಿ,ಕಟೀಲು ಶ್ರೀ ದುರ್ಗಾಪರಮೇಶ್ವರಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು.