ಬೈಂದೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಯಾವುದೇ ಚರ್ಚೆ ನಡೆಸುತ್ತಿಲ್ಲ. ಯೋಜನೆಯಿಂದ ಜನರಿಗೆ ಅನುಕೂಲವಾದರೆ ಅದಕ್ಕೆ ನಮ್ಮ ಆಕ್ಷೇಪವು ಇಲ್ಲ. ಯೋಜನೆ ಸಿಗದಿರುವ ಬಗ್ಗೆ ಅನೇಕರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಕೊಡುವ ಸಾಮರ್ಥ್ಯ, ಆರ್ಥಿಕ ವ್ಯವಸ್ಥೆ, ಅಭಿವೃದ್ಧಿ, ಅನುದಾನ ಇತ್ಯಾದಿಗಳನ್ನು ಹಾಳು ಮಾಡಿಕೊಂಡು ಗ್ಯಾರಂಟಿ ಕೊಡುವುದರ ಬಗ್ಗೆ ಪ್ರಶ್ನೆ ಎತ್ತಿದ್ದೆವೆಯೇ ಹೊರತು, ಜನರಿಗೆ ಲಾಭ ಸಿಕ್ಕಿದ್ದನ್ನು ದೂರುವುದಿಲ್ಲ. ಈ ಬಗ್ಗೆಯೂ ನಮಗೆ ಸ್ಪಷ್ಟತೆಯಿದೆ ಎಂಬುದು ಶಾಸಕರಾದ ಗುರುರಾಜ ಗಂಟಿಹೊಳೆ ಅಭಿಪ್ರಾಯವಾಗಿದೆ.
ಹೀಗೆ ಬೂತ್ ಕಡೆಗೆ ಸಮೃದ್ಧ ನಡಿಗೆ ಚುನಾವಣೆಯ ದೃಷ್ಟಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಅವರಿಗೆ 1 ಲಕ್ಷ ಲೀಡ್ ನೀಡುವ ಸಂಕಲ್ಪದ ಭಾಗವಾಗಿ ನಡೆಯುತ್ತಿದ್ದರೂ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ. ಬೂತ್ ಹಂತದಲ್ಲಿ ಮುಖಂಡರು, ಪ್ರಮುಖರಿಗೆ ಉತ್ಸಾಹ ಹೆಚ್ಚಿಸುತ್ತಿದೆ. ಪಕ್ಷ ಸಂಘಟನೆಗೂ ಒತ್ತು ನೀಡುತ್ತಿರುವ ಶಾಸಕರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.
ಬಿಜೆಪಿಯ ಹಿರಿಯರು ಯಾವ ಕನಸು ಕಂಡಿದ್ದಾರೋ ಮತ್ತು ಪಕ್ಷ ಸಂಘಟನೆಯಲ್ಲಿ ಯಾವ ವಿಧಾನ ಪರಿಣಾಮಕಾರಿಯಾಗಬಹುದು ಎಂಬುದನ್ನು ವಸ್ತುಸಹ ಅನುಷ್ಠಾನಕ್ಕೆ ತರುವ ಮೂಲಕ ಶಾಸಕರಾದ ಗುರುರಾಜ ಗಂಟಿಹೊಳೆಯವರು ಎಲ್ಲರಿಗಿಂತ ಮಾದರಿಯಾಗಿದೆ. ಒಂದು ಕ್ಷೇತ್ರದ ಎಲ್ಲ ಬೂತ್ ಗಳನ್ನು ಸೀಮಿತ ಅವಧಿಯಲ್ಲಿ ತಲುಪುವುದು, ಕಾರ್ಯಕರ್ತರ ಸಭೆ ನಡೆಸಿ, ಸಮಸ್ಯೆ ಆಲಿಸುವುದು ಸುಲಭದ ಕಾರ್ಯವಲ್ಲ. ಇಚ್ಛಾಶಕ್ತಿ ಹಾಗೂ ತಾಳ್ಮೆ ಎರಡೂ ಅವಶ್ಯಕ. ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಶಾಸಕರು ಮಾಡಿ ತೋರಿಸುತ್ತಿದ್ದಾರೆ. ಶಾಸಕರ ಈ ನಡೆ ಎಲ್ಲರಿಗೂ ಮಾದರಿಯಾಗಿದೆ.