Home » ಮೋದಿ ನೋಡಲು ಹರಿದು ಬಂದ ಜನಸಾಗರ
 

ಮೋದಿ ನೋಡಲು ಹರಿದು ಬಂದ ಜನಸಾಗರ

by Kundapur Xpress
Spread the love

ಮಂಗಳೂರು: ಭಾನುವಾರ ಸಂಜೆ ಮಂಗಳೂರಿಗೆ ಬಂದ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಣಲೆಂದು ಸಾಗರೋಪಾದಿಯಲ್ಲಿ ಹರಿದು ಬಂದು, ವಸ್ತುಶಃ ‘ಕೇಸರಿ ಸುನಾಮಿ’ ಎಬ್ಬಿಸಿದ ಕರಾವಳಿಯ ಜನತೆ ಹೊಸ ದಾಖಲೆ ಬರೆಯಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ನಡುವೆ ತೆರೆದ ವಾಹನದಲ್ಲಿ ಆಗಮಿಸಿದ ಮೋದಿಯವರಿಗೆ ಮಕ್ಕಳು, ತಾಯಂದಿರು, ವೃದ್ಧರು, ಯುವಕರೆನ್ನದೆ ಸೇರಿದ ಲಕ್ಷಾಂತರ ಜನ ಹೂಮಳೆಗರೆದು ಪ್ರೀತಿ, ಗೌರವ ತೋರಿದರು.
ಮೈಸೂರಿನಲ್ಲಿ ಹಳೆ ಮೈಸೂರು ಭಾಗದ ಬಿಜೆಪಿ -ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಗಳ ಪರವಾಗಿ ಆಯೋಜಿತವಾಗಿದ್ದ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಬಳಿಕ ನೇರವಾಗಿ ಮಂಗಳೂರಿಗೆ ಸಮಯಕ್ಕೆ ಸರಿಯಾಗಿ ಆಗಮಿಸಿದ ಮೋದಿಯವರು ತಮಗಾಗಿ ಸಂಜೆಯಿಂದಲೇ ಕಾಯುತ್ತಿದ್ದ ಜನರ ಪ್ರೀತಿಯನ್ನು ಕಂಡು ಮನಸೋತರು. ನಗುವಿನೊಂದಿಗೆ ಜನರೆಡೆಗೆ ಮರಳಿ ಹೂಮಳೆಗರೆದು ತಮ್ಮ ಕೈಯ್ಯಲ್ಲಿದ್ದ ತಾವರೆ ಚಿಹ್ನೆಯನ್ನು ತೋರಿ ಕೃತಜ್ಞತೆ ಸಮರ್ಪಿಸಿದರು.ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳಾದ ಬ್ರಿಜೇಶ್ ಚೌಟ (ದಕ್ಷಿಣ ಕನ್ನಡ), ಕೋಟ ಶ್ರೀನಿವಾಸ ಪೂಜಾರಿ (ಉಡುಪಿ-ಚಿಕ್ಕಮಗಳೂರು ) ಅವರ ಪರವಾಗಿ ಬೆಂಬಲ ಯಾಚಿಸಿದರು.

ಮೋದಿಯವರು ಬ್ರಹ್ಮಶ್ರೀನಾರಾಯಣಗುರು ವೃತ್ತದಿಂದ ಆರಂಭಿಸಿದ ರೋಡ್‌ಶೋ ಉದ್ದಕ್ಕೂ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ, ಹುಲಿವೇಷ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗನ್ನೂ ಕಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ರಸ್ತೆಗಳೆಲ್ಲ ಮೋದಿ-ಬಿಜೆಪಿ ಅಭಿಮಾನಿಗಳಿಂದ ತುಂಬಿ ಭಾರತ್ ಮಾತಾಕಿ ಜೈ, ಜೈ ಜೈ ಬಿಜೆಪಿ, ಜೈ ಜೈ ಮೋದಿ…ಹೀಗೆ ಘೋಷಣೆಗಳಿಂದ ಅನುರಣಿಸುತ್ತಿತ್ತು. ಮಂಗಳೂರು ‘ಕೇಸರಿ ಹಬ್ಬದಿಂದ ಕಳೆಗಟ್ಟಿತ್ತು

   

Related Articles

error: Content is protected !!