ನವದೆಹಲಿ: ‘2047ಕ್ಕೆ ಭಾರತ ವಿಕಸಿತ ದೇಶ ಆಗಲು ಹಲವು ಕ್ರಮ ಜರುಗಿಸುವೆ. ಹಲವು ದೊಡ್ಡ ನಿರ್ಧಾರಗಳನ್ನೂ ಕೈಗೊಳ್ಳುವೆ. ಆದರೆ ನನ್ನ ದೊಡ್ಡ ಯೋಜನೆಗಳ ಬಗ್ಗೆ ಭಯ ಬೇಡ. ನಾನು ಯಾರನ್ನೂ ಹೆದರಿಸುವ ತೀರ್ಮಾನ ಕೈಗೊಳ್ಳಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎಎನ್‌ಐ ಸುದ್ದಿಸಂಸ್ಥೆಗೆ ಸೋಮವಾರ ಸಂದರ್ಶನ ನೀಡಿದ ಅವರು, ‘2047ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡಲು ಪಣ ತೊಡಲಾಗಿದೆ. ಆದರೆ ಇದಕ್ಕಾಗಿ ದೊಡ್ಡ ಯೋಜನೆಗಳನ್ನು ನಾನು ಹಮ್ಮಿ ಕೊಳ್ಳಲಿದ್ದೇನೆ ಎಂದು ಹೇಳಿದಾಗ ಹಲವರು ಭಯ ಪಟ್ಟಿದ್ದಾರೆ. ಯಾರೂ ಭಯಪಡ ಬಾರದು, ನಾನು ಯಾರನ್ನೂ ಹೆದರಿಸುವ ಅಥವಾ ಓಡಿಸುವ ನಿರ್ಧಾರಗಳನ್ನು ತೆಗೆದುಕೊ ಳ್ಳುವುದಿಲ್ಲ, ಯಾರಿಗೂ ಹೆದರಿಸುವ ಅವಶ್ಯಕತೆ ನನಗಿಲ್ಲ.ನಾನುರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ಆಗಲಿವೆ. ಇದಕ್ಕಾಗಿ ಒಂದು ರೋಡ್ ಮ್ಯಾಪ್ ಸಿದ್ಧಗೊಳಿಸಲಾಗಿದೆ’ ಎಂದರು.