ಕುಂದಾಪುರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ ವಾಣಿಜ್ಯಶಾಸ್ತ್ರದ ವಿಭಾಗದಿಂದ ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೇಟರಿ ಕೋರ್ಸ್‍ನ ಮಹತ್ವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಉದ್ಯೋಗ ಕ್ಷೇತ್ರದಲ್ಲಿ ತಾವು ಪೈಪೋಟಿ ಎದುರಿಸುತ್ತಿರುವ ಇಂದಿನ ಶಾಲಾ ಮಟ್ಟದಲ್ಲಿ ಕೇವಲ ಸರ್ಕಾರಿ ಉದ್ಯೋಗಕ್ಕಾಗಿ ಕಾಯದೇ, ವೃತ್ತಿಪರ ಕೋರ್ಸುಗಳಾದ ಚಾರ್ಟೆಡ್ ಅಕೌಂಟೆಂಟ್, ಕಂಪನಿ ಸೆಕ್ರೇಟರಿ, ಹಾಗೂ ಸಿ.ಎಮ್.ಎ. ಅಂತಹ ಕೋರ್ಸ್‍ಗಳನ್ನು ಓದಿ ಉತ್ತಮ ಸಂಪಾದನೆಯೊಂದಿಗೆ ಬದುಕಬೇಕೆಂದು ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಇವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಸಿ.ಎಸ್. ಸಂತೋಷ ಪ್ರಭು, ಪ್ರಾಕ್ಟೀಸಿಂಗ್ ಕಂಪನಿ ಸೆಕ್ರೇಟರಿ, ಉಡುಪಿ ಇವರು ವಿದ್ಯಾರ್ಥಿಗಳಿಗೆ ಸಿ.ಎಸ್. ಕೋರ್ಸ್‍ಗೆ ದಾಖಲಾಗುವ ವಿಧಾನ ಹಾಗೂ ಸಿ.ಎಸ್.ನ ಪ್ರಯೋಜನಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶಂಕರ ಬಿ., ಸೀನಿಯರ್ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್, ಜಾಪುರ್, ಐಸಿಎಸ್‍ಐ ಮಂಗಳೂರು ಇವರು ಉಪಸ್ಥಿತರಿದ್ದರು. ಡಾ. ಶೇಖರ ಬಿ ಮುಖ್ಯಸ್ಥರು ವಾಣಿಜ್ಯಶಾಸ್ತ್ರ ವಿಭಾಗ ಇವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಾಮರಾಯ ಆಚಾರ್ಯ ಹಾಗೂ ಐಕ್ಯೂಎಸಿ ಸಂಚಾಲಕರಾದ ಶ್ರೀ ನಾಗರಾಜ ಯು. ಉಪಸ್ಥಿತರಿದ್ದರು. ಗೌರೀಶ ಅಂತಿಮ ಬಿ.ಕಾಂ. ಇವರು ಕಾರ್ಯಕ್ರಮವನ್ನು ನಿರೂಪಿಸಿ, ಅನನ್ಯ, ಅಂತಿಮ ಬಿ.ಕಾಂ. ಇವರು ವಂದಿಸಿದರು.