Home » ಏ.21, 28ರಂದು ಮಹಾಸಂಪರ್ಕ ಅಭಿಯಾನ
 

ಏ.21, 28ರಂದು ಮಹಾಸಂಪರ್ಕ ಅಭಿಯಾನ

by Kundapur Xpress
Spread the love

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮನೆ ಮನೆ ಪ್ರಚಾರ, ಮನೆಯಂಗಳದಲ್ಲಿ ಸಭೆಗಳು ಬಿರುಸು ಪಡೆದುಕೊಂಡಿವೆ. ಏ.21 ಮತ್ತು 28ರಂದು ಮಹಾ ಸಂಪರ್ಕ ಅಭಿಯಾನ ನಡೆಯಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾ‌ರ್ ತಿಳಿಸಿದರು. ಬಿಜೆಪಿ ಲೋಕಸಭಾ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ ಎಂಬ ಘೋಷಣೆ ಇಟ್ಟುಕೊಂಡು ಚುನಾವಣಾ ಮಹಾ ಸಂಪರ್ಕ ಅಭಿಯಾನ ನಡೆಸಲಿದ್ದೇವೆ 

ಒಂದು ದಿನವೂ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಒಂದು ಭಾನುವಾರ ಕೊಡಬೇಕೆನ್ನುವ ಕರೆಯನ್ನು ಅವರ ಅಭಿಮಾನಿಗಳಿಗೆ ನೀಡಿದ್ದೇವೆ ಎಂದರು. ಮನೆ, ವ್ಯಾಪರ ಸ್ಥಳ, ವಾಕಿಂಗ್ ಸ್ಥಳ, ಅಪಾರ್ಟ್‌ಮೆಂಟ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಮೋದಿಯವರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಏ.21ರಂದು 15 ಲಕ್ಷ ಜನರು ಕೆಲವು ತಾಸು ಚುನಾವಣಾ `ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

   

Related Articles

error: Content is protected !!