Home » ಉಡುಪಿ ಜಿಲ್ಲೆಗೆ ಸ್ಟಾರ್‌ ಪ್ರಚಾರಕರು
 

ಉಡುಪಿ ಜಿಲ್ಲೆಗೆ ಸ್ಟಾರ್‌ ಪ್ರಚಾರಕರು

by Kundapur Xpress
Spread the love

ಉಡುಪಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಅರಿವು ಮೂಡಿಸಲು ಬಿಜೆಪಿ ವಿವಿಧ ಸ್ಟಾರ್ ಕ್ಯಾಂಪೇನರ್‌ಗಳನ್ನು ಕರಾವಳಿಗೆ ಕರೆತರಲು ಯೋಜನೆ ರೂಪಿಸಿದೆ

ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಬಿ.ವೈ ವಿಜಯೇಂದ್ರ  ಏ.20 ರಂದು ಬೆಳಗ್ಗೆ 10.30 ಕ್ಕೆ ಬಿಜೆಪಿ ಯುವಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯ ಬಳಿ ನಡೆಯುವ ಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಏಪ್ರಿಲ್ 19 ಕ್ಕೆ ಮೀನಾಕ್ಷಿ ಲೇಖಿ ಮತ್ತು ಸುಮಲತಾ

ಏಪ್ರಿಲ್ 19 ರಂದು ಮಂಡ್ಯದ ಸಂಸದೆ ಸುಮಲತಾ ಮತ್ತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಉಡುಪಿ ಸಮೀಪದ ಉಪ್ಪೂರು ಗ್ರಾಮದ ರಾಮಕ್ಷತ್ರಿಯ ಸಭಾಭವನದಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಏ. 21 ಕ್ಕೆ ಪ್ರತಾಪ್ ಸಿಂಹ

ಮೈಸೂರಿನ ಸಂಸದ ಪ್ರತಾಪ್ ಸಿಂಹ ಜಿಲ್ಲೆಯ ಕಾಪು ಪೇಟೆಯಲ್ಲಿ ಏ.21 ರಂದು ಸಂಜೆ 5 ಗಂಟೆಗೆ ರೋಡ್ ಶೋ ನಡೆಸಲಿದ್ದಾರೆ. ಕರಾವಳಿಯಲ್ಲಿಯೂ ಪ್ರತಾಪ್ ಸಿಂಹರನ್ನು ಲೇಖಕವಾಗಿ, ಯುವ ರಾಜಕಾರಣಿಯಾಗಿ ಒಪ್ಪಿಕೊಂಡಿರುವ ಅಭಿಮಾನಿ ವರ್ಗವಿದ್ದು ಅವರ ರೋಡ್ ಶೋ ಹಮ್ಮಿಕೊಂಡಿರುವುದು ಗಮನ ಸೆಳೆದಿದೆ.

ಏ. 23ರಂದು ಅಣ್ಣಾಮಲೈ

ಏ.23 ರಂದು ಉಡುಪಿಯ ಮಾಜಿ ಪೊಲೀಸ್ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಆಗಮಿಸಲಿದ್ದು, ಅಂದು ಸಂಜೆ 3 ಗಂಟೆಗೆ ಮಾಬುಕಳ, 4 ಗಂಟೆಗೆ ಬ್ರಹ್ಮಾವರ ಹಾಗೂ 5 ಗಂಟೆಗೆ ಕಾರ್ಕಳದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊದಲ ಪೋಸ್ಟಿಂಗ್ ಉಡುಪಿ ಜಿಲ್ಲೆಯಲ್ಲಾಗಿತ್ತು. ಪೊಲೀಸ್ ಆಗಿ ಉತ್ತಮ ಹೆಸರು ಪಡೆದಿರುವ ಅಣ್ಣಾಮಲೈ ಅವರಿಗೆ ಅಭಿಮಾನಿಗಳಿದ್ದಾರೆ.

   

Related Articles

error: Content is protected !!