ಬೆಳಗಾವಿ: ಹುಬಳ್ಳಿಯಲ್ಲಿ ನೇಹಾ ಕೊಲೆ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಅದು ಕೂಡ ನೆಹಾಳನ್ನು ಕೊಲೆ ಮಾಡಿದ ಆರೋಪಿಯ ಗ್ರಾಮ ಮುನವಳ್ಳಿಯಲ್ಲಿಯೇ ಎಂಬುದು ಆತಂಕದ ಸಂಗತಿಯಾಗಿದ್ದು ಈ ಘಟನೆಯಿಂದ ಈಗ ಯುವತಿಯರಷ್ಟೇ ಅಲ್ಲದೇ ವಿವಾಹಿತ ಹಿಂದೂ ಮಹಿಳೆಯರನ್ನು ಗುರಿ ಮಾಡುತ್ತಿರುವುದು ಬಹಿರಂಗಗೊಂಡಿದ್ದು ವಿವಾಹಿತ ಮಹಿಳೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ, ಆಕೆಯ ಖಾಸಗಿ ಫೋಟೋಗಳನ್ನಿಟ್ಟುಕೊಂಡು ಮತಾಂತರಕ್ಕೆ ಬಲವಂತ ಮಾಡಿ ದೌರ್ಜನ್ಯ ಎಸಗಲಾಗಿದೆ. ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಕಿರಾಣಿ ಅಂಗಡಿಯನ್ನಿಟ್ಟುಕೊಂಡಿರುವ ಸಂತ್ರಸ್ತೆ ಮಹಿಳೆ ನೀಡಿದ ದೂರಿನನ್ವಯ ಸವದತ್ತಿ ಪೊಲೀಸರು ಆರೋಪಿ ದಂಪತಿಯಾದ ರಫೀಕ್ ಬೇಪಾರಿ ಹಾಗೂ ಆತನ ಪತ್ನಿ ಕೌಸರ್ ಬೇಪಾರಿಯನ್ನು ಬಂಧಿಸಿದ್ದು, ಈ ಪ್ರಕರಣದಿಂದ ಲವ್ ಜಿಹಾದ್ ಕರಾಳ ಮುಖ ಬಯಲಾದಂತಾಗಿದೆ