ಸೂರತ್: ಗುಜರಾತ್ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಕಲಿ ಸಹಿಗಳ ಕಾರಣದಿಂದ ಕಾಂಗ್ರೆಸ್ನ ಇಬ್ಬರೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, ಇತರ ಎಂಟು ಅಭ್ಯರ್ಥಿಗಳೂ ಸೋಮವಾರ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡ ಕಾರಣ ದಲಾಲ್ ಗೆಲುವು ಸುಗಮವಾಗಿದೆ.
ಚುನಾವಣಾಧಿಕಾರಿ ಸೌರಭ್ ಪದಿರ್, ದಲಾಲ್ ಅವರಿಗೆ ಗೆಲುವಿನ ಪ್ರಮಾಣಪತ್ರವನ್ನೂ ವಿತರಿಸಿದ್ದಾರೆ. ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್, ದಲಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೇ 7 ರಂದು ಮೂರನೇ ಹಂತದಲ್ಲಿ ಗುಜರಾತ್ ನಲ್ಲಿ ಮತದಾನ ನಡೆಯಲಿದೆ. ಗುಜರಾತ್ನಲ್ಲಿ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕಡೆಯ ದಿನವಾಗಿತ್ತು. ಉಮೇದುವಾರಿಕೆ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು