ಬೆಂಗಳೂರು: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿ ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಜರಗುತ್ತಿದೆ. ಅರ್ಹ ಎಲ್ಲ ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸಿ ಈ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಬೇಕಿದೆ. ಇದಕ್ಕಾಗಿ. ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ಬೆಳಗ್ಗೆ 7.00 ಗಂಟೆಯಿಂದ ಸಂಜೆ 6 .00 ರವರೆಗೆ ಮತದಾನ ನಡೆಯಲಿರುವುದರಿಂದ ಮತದಾರರು ತಮ್ಮ ಅನುಕೂಲ ತಕ್ಕಂತೆ ನಿಗದಿತ ಮತಕೇಂದ್ರಕ್ಕೆ ಬಂದು ಮತ ಚಲಾಯಿಸಬಹುದು. ಮತದಾರರೊಬ್ಬರ ಒಂದು ಮತವು ರಾಷ್ಟ್ರದ ಭವಿಷ್ಯವನ್ನೇ ಬದಲಾಯಿಸಲಿದೆ. ಆದ್ದರಿಂದ ಮನೆಯಲ್ಲಿಯೇ ಕುಳಿತು ಅದನ್ನು ಹಾಳುಗೆಡವದೇ ದೇಶದ ಭವಿಷ್ಯಕ್ಕಾಗಿ ಮಳೆ ಬಿಸಿಲು ತಾಪತ್ರಯ ಎನೇ ಇದ್ದರೂ ಸಂವಿಧಾನ ಕೊಟ್ಟಿರುವ ಈ ಹಕ್ಕನ್ನು ತಪ್ಪದೇ ಚಲಾಯಿಸಬೇಕಿದೆ.