ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆದಿದೆ. ಸಣ್ಣಪುಟ್ಟ ಗೊಂದಲಗಳನ್ನು ಹೊರತು ಪಡಿಸಿದರೆ ಮತದಾರರು ನಿರ್ಭಯವಾಗಿ ಮತದಾನ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ಶೇ.77.44 ಪ್ರತಿಶತ ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ
ಶುಕ್ರವಾರ ಶುಭ ದಿನವಾಗಿದ್ದು ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳು ಹೆಚ್ಚಿದ್ದರೂ ಜನತೆ ಮತದಾನಕ್ಕೆ ಆದ್ಯತೆ ನೀಡಿದ್ದಾರೆ. ವಿವಿಧೆಡೆ ವಧು-ವರರು ಮದುವೆ ದಿರಿಸಿನಲ್ಲೇ ಮತದಾನಕ್ಕೆ ಬಂದು ಮತದಾನ ಮಾಡಿ ಬದ್ಧತೆ ಮೆರೆದಿದ್ದಾರೆ. ಸಾರಿಗೆ ಸಂಪರ್ಕ ಇಲ್ಲದ ಪಾವೂರಿನ ಜನತೆ ಬೋಟ್ ಮೂಲಕ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ