ಉಡುಪಿ : ವೃತ್ತಿಪರ ಕೋರ್ಸ್ ಗಳ ತರಬೇತಿಯೊಂದಿಗೆ ಪದವಿ ಹಾಗೂ ಪದವಿಪೂರ್ವ ಶಿಕ್ಷಣದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಉಡುಪಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತಮ್ಮ ಅಂಗ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಬಿ.ಕಾಂ ಶಿಕ್ಷಣದ ಜೊತೆಗೆ ಸಿಎ ಮತ್ತು ಸಿ ಎಸ್ ಕೋರ್ಸ್ ತರಬೇತಿಯನ್ನು ನೀಡುತ್ತಿದೆ ಹಾಗೂ ಕಂಪ್ಯೂಟರ್ ಕ್ಷೇತ್ರದಲ್ಲಿ ಅತ್ಯಂತ ಬೇಡಿಕೆಯ ಗುಣಮಟ್ಟದ ಬಿ.ಸಿ.ಎ ಪದವಿಯನ್ನು ನೀಡುತ್ತಿದೆ.
ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕಲಿಯಲು ಸಹಕಾರಿಯಾಗುವ ಕೋರ್ಸ್ ಬಿ.ಸಿ.ಎ ಪಠ್ಯದ ಕಲಿಕೆಯನ್ನು ಪ್ರಾಯೋಗಿಕ ಅಭ್ಯಾಸದೊಂದಿಗೆ ಸಂಯೋಜಿಸುವ ಮೂಲಕ ಕಂಪ್ಯೂಟರ್ ಅಪ್ಲಿಕೇಶನ್ ಗಳ ಕ್ಷೇತ್ರದಲ್ಲಿ ಪರಿಣಿತರಾಗುವಂತೆ ತ್ರಿಶಾ ಸಂಸ್ಥೆಯು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ.
ಐ.ಐ.ಟಿ ಸರ್ಟಿಫಿಕೇಟ್ ಕೋರ್ಸ್ ಗಳು :
ಬಿ.ಸಿ.ಎ ವಿದ್ಯಾರ್ಥಿಗಳ ಜ್ಞಾನದ ಅಭಿವೃದ್ಧಿಗಾಗಿ ಪ್ರತಿಷ್ಠಿತ ಐ.ಐ.ಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಹಾಗೂ ಎನ್.ಎಸ್.ಡಿ.ಸಿ. (ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್) ವತಿಯಿಂದ ಅನೇಕ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ.
ಬಿ.ಸಿ.ಎ ಕೋರ್ಸ್ ನ ವಿಶೇಷತೆ ಎಂಬಂತೆ ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿ ಇಂಜಿನಿಯರ್ ವಿದ್ಯಾರ್ಥಿಗಳು ಪಡೆದುಕೊಳ್ಳುವ ಹಲವಷ್ಟು ವಿಷಯಗಳ ಜ್ಞಾನವನ್ನು ಪಡೆದುಕೊಳ್ಳಬಹುದು . ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಎರಡರಿಂದ ಐದು ಲಕ್ಷದವರೆಗೆ ವೆಚ್ಚ ತಗುಲಲಿದ್ದು, ಬಿ.ಸಿ.ಎ ಕೋರ್ಸ್ ಒಂದು ವರ್ಷಕ್ಕೆ ಮೂವತ್ತರಿಂದ ಐವತ್ತು ಸಾವಿರ ತಗಲುತ್ತದೆ- ಇದರಿಂದ ವಿಷಯ ಜ್ಞಾನ ಹೆಚ್ಚುವುದಲ್ಲದೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ವಿದ್ಯೆಯನ್ನು ಪಡೆದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಅದಲ್ಲದೆ ತ್ರಿಶಾ ಸಂಸ್ಥೆ ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಸಿ.ಎ ನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕ್ಯಾಂಪಸ್ ನಲ್ಲಿಯೇ ಪಡೆಯುವ ಹಲವಾರು ಕಾರ್ಯಾಗಾರವನ್ನು ನಡೆಸುತ್ತದೆ. ಪಿಯುಸಿಯಲ್ಲಿ ಶೇಕಡ 70 ಕ್ಕಿಂತ ಹೆಚ್ಚು ಫಲಿತಾಂಶವನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ಪಡೆಯುವ ಅವಕಾಶವಿದೆ.
ಶೇಕಡವಾರು ಅಂಕ (%) | ವಿದ್ಯಾರ್ಥಿವೇತನ |
95% ಕ್ಕಿಂತ ಹೆಚ್ಚು | 20000 |
90 – 95% | 15000 |
85 – 90% | 10000 |
80 – 85% | 5000 |
70 – 80% | 3000 |
ಆಸಕ್ತರು ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.