ಉಡುಪಿ : ಜಗನ್ನಿಯಾಮಕನಾದ ಶ್ರೀಕೃಷ್ಣನು ತನ್ನ ದಿವ್ಯವಾದ ಸಾನ್ನಿಧ್ಯವನ್ನು ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಇಟ್ಟಿದ್ದಾನೆ. ಆದ್ದರಿಂದ ಶ್ರೀಮದ್ಭಾಗವತವು ಸಾಕ್ಷಾತ್ ಶ್ರೀಕೃಷ್ಣ ಸ್ವರೂಪವಾಗಿದೆ. ಕಲಿಯ ಬಾಧೆಯಿಂದ ಪಾರಾಗಲು ಶ್ರೀಮದ್ಭಾಗವತವೇ ದಿವ್ಯೌಷಧಿಯಾಗಿದೆ. ಇಂಥಹ ಶ್ರೀಮದ್ಭಾಗವತ ಪ್ರವಚನ ಸಪ್ತಾಹವನ್ನು ಪರಮಪೂಜ್ಯ. ಶ್ರೀ ಶ್ರೀ ಸುವಿದ್ಯೇಂದ್ರತೀರ್ಥಶ್ರೀಪಾದರು ಶ್ರೀಕೃಷ್ಣನ ಸನ್ನಿಧಿಯಲ್ಲಿ ಇವತ್ತಿನಿಂದ ಪ್ರಾರಂಭಿಸಿದರು
ಅಭಿನವ ಶುಕಾಚಾರ್ಯರೆಂದೇ ಪ್ರಸಿದ್ಧರಾಗಿರುವ ಶ್ರೀಸುವಿದ್ಯೇಂದ್ರತೀರ್ಥಶ್ರೀಪಾದರು ಈ ವರೆಗೆ ಸಾವಿರಾರು ಬಾರಿ ಶ್ರೀಮದ್ಭಾಗವತ ಪ್ರವಚನನ್ನು ನಡೆಸಿದ್ದಾರೆ. ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ವಿಶೇಷ ಸಂಕಲ್ಪದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಂದಿನಿಂದ ಪ್ರಾರಂಭವಾಗಿ ಮೇ 6 ರವರಿಗೆ ಪ್ರವಚನ ಕಾರ್ಯಕ್ರಮ ನಡೆಯಲಿದ್ದು ಮಠದ ದಿವಾನರಾದ ಶ್ರೀ ಮುರಲೀಧರಾಚಾರ್ಯ ದಂಪತಿಗಳು ಈ ಕಾರ್ಯಕ್ರವನ್ನು ಪ್ರಯೋಜಿಸಿದ್ದಾರೆ .
ಸಕಲ ಭಗವದ್ಭಕ್ತರಿಗೆ ಹಾರ್ದಿಕ ಸ್ವಾಗತ
ಸಮಯ ಸಾಯಂ 6.000 ರಿಂದ 7.00
ಸ್ಥಳ : ರಾಜಾಂಗಣ