ಕುಂದಾಪುರ : ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ಷಿಕೋತ್ಸವ ನಡೆಯಿತು. ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪುರಸ್ಕೃತ ಪ್ರೊ. ಕೆ. ಪಿ. ರಾವ್ ರವರು ಮುಖ್ಯ ಅತಿಥಿಗಳಾಗಿ ಆಮಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 6 ದಶಕಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೆಳವಣಿಗೆಯ ಬಗ್ಗೆ ಸಭಿಕರಿಗೆ ಸಮಗ್ರವಾಗಿ ವಿವರಿಸಿದರು. ಯಂತ್ರ ಕಲಿಕೆಯ ತತ್ವಗಳು ಮತ್ತು ಪ್ರಕ್ರಿಯೆಯ ಕುರಿತು ಅವರು ತಮ್ಮದೇ ಪ್ರಯೋಗಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು ಮತ್ತು ಎಐ ಅಭಿವೃದ್ಧಿಗೆ ದುಡಿದ ವ್ಯಕ್ತಿಗಳು ಮತ್ತು ಅವರ ಕೊಡುಗೆಯನ್ನು ಉಲ್ಲೇಖಿಸಿದರು
ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭವಾಯಿತು. ಪ್ರಾರಂಭದಲ್ಲಿ ಎಂಐಟಿಕೆ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ ಸಂಸ್ಥೆಯ ವಾರ್ಷಿಕ ವರದಿಯನ್ನು ವಾಚಿಸಿ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ಎಲ್ಲ ಸಾಧಕರನ್ನು ಅಭಿನಂದಿಸಿದರು. ವರದಿಯ ಪ್ರಮುಖ ಅಂಶವೆಂದರೆ, ಕ್ಯೂ 2 ಸ್ಟ್ಯಾಂಡರ್ಡ್ ಜರ್ನಲ್ಗಳನ್ನೂ ಒಳಗೊಂಡ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಕಟಿಸಿದ ಇಂಟರ್ನ್ಯಾಷನಲ್ ಜರ್ನಲ್ ಪೇಪರ್ಸ್ ಗಳ ಸಂಖ್ಯೆ 20. ಇದು ಎಂಐಟಕೆ ಯ ಅತ್ಯುತ್ತಮ ತಾಂತ್ರಿಕ ಶಿಕ್ಷಣ ಬೋಧನಾ ಕ್ರಮದ ಶ ಬಗ್ಗೆ ತಿಳಿಸುತ್ತದೆ. ಈ ಸಂದರ್ಭದಲ್ಲಿ ಕ್ಯಾಂಪಸ್ ನಲ್ಲಿ ಉನ್ನತ ಮಟ್ಟದ ಅತ್ಯಾಧುನಿಕ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡಿದ ಅಧ್ಯಕ್ಷ ಶ್ರೀ ಸಿದ್ದಾರ್ಥ ಜೆ ಶೆಟ್ಟಿ ಅವರಿಗೆ ಪ್ರಾಂಶುಪಾಲರು ಧನ್ಯವಾದ ಅರ್ಪಿಸಿದರು.