ಬೆಂಗಳೂರು : ಎಚ್.ಡಿ.ರೇವಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆದರೆ ಪ್ರಜ್ವಲ್ ರೇವಣ್ಣ ತನ್ನ ಮೇಲೆ ಬಲಾತ್ಕಾರ ನಡೆಸಿದ್ದಾರೆ ಎಂದು ಅಪಹರಣದಿಂದ ರಕ್ಷಿಸಲಾಗಿರುವ ಸಂತ್ರಸ್ತೆ ಎಸ್ ಐ ಟಿ ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ದೌರ್ಜನ್ಯದ ಬಗ್ಗೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಲು ಸಂತ್ರಸ್ತೆ ಒಪ್ಪಿಕೊಂಡಿದ್ದಾರೆ. ಆಕೆಯನ್ನು ಸೋಮವಾರ ಅಥವಾ ಮಂಗಳವಾರ ಜಡ್ಜ್ ಎದುರು ಹಾಜರುಪಡಿಸಿ ಸಿಆರ್ಪಿಸಿ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸಲು ಎಸ್ಐಟಿ ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.