ಕೋಟ: ಯಕ್ಷಗಾನ ಶ್ರೀಮಂತ ಕಲೆ ಅದನ್ನು ಮುಂದಿನ ತಲೆಮಾರಿಗೆ ಅರ್ಥಪೂರ್ಣವಾಗಿ ಕೊಂಡ್ಯೋಯುವ ಕೆಲಸ ಆಗಬೇಕಿದೆ ಎಂದು ಯಕ್ಷಗಾನ ವಿಮರ್ಶಕ ಎಚ್ ಸುಜಯೀಂದ್ರ ಹಂದೆ ನುಡಿದರು. ಶನಿವಾರ ಕೋಟದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಒಂಭತ್ತನೆ ವರ್ಷದ ವಾರ್ಷಿಕೋತ್ಸವ ರಂಗಾರ್ಪಣಾ 2024ರ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿ ಯಕ್ಷಗಾನ ವಿಶ್ಚದೆಲ್ಲೆಡೆ ವಿಶ್ವಗಾನವಾಗಿ ಪಸರಿಸಿಕೊಂಡಿದೆ.ಬೇರೆ ಕಲೆಗಳಿಗಿಂತ ವಿಶಿಷ್ಠ ಭಕ್ತಭಾವದಿಂದ ನೋಡುವ ಯಕ್ಷಗಾನ ಶ್ರೇಷ್ಠತೆ ಪಡೆದುಕೊಂಡಿದೆ. ಅದರಲ್ಲಿ ಬಡಗು ತೆಂಕು ಮೇಳೈಸಿದರೂ ನಡು ತಿಟ್ಟಿಗೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.ಸಾಂಪ್ರದಾಯಿಕ ವೇಷಭೂಣ ಹಾವ ಭಾವಗಳಿಂದ ತನ್ನದೆ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ.ಈ ನಡುವೆ ಯಕ್ಷಗಾನ ಬಡವಾಗುತ್ತಿರುವುದು ಬೇಸರದಾಯಕ ವಿಚಾರವಾಗಿದೆ.ಬೆರಳೆಣಿಕೆಯ ಕಲಾವಿದರು ಯಕ್ಷಗಾನದ ಮೌಲ್ಯಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ ಈ ದಿಸೆಯಲ್ಲಿ ಯಕ್ಷಗಾನದ ಮೂಲಕ ಮೊಳಹಳ್ಳಿ,ಶಿರಿಯಾರರ ಶೈಲಿಯನ್ನು ಕಲಾರಸಿಕರಿಗೆ ಧಾರೆ ಎರೆಯುತ್ತಿದ್ದಾರೆ.ಇಂಥಹ ಮಹಾನ್ ಕಲಾವಿದರಿಗೆ ಯಕ್ಷಸೌರಭ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು