ಕೋಟ: ಗುರುಗಳ ಬಗ್ಗೆ ವಿಶೇಷ ಗೌರವ ಹಾಗೂ ಅವರ ನೆನಪಿನ ಮೂಲಕ ಶಿಷ್ಯವರ್ಗ ಗೌರವ ಸಲ್ಲಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.
ಭಾನುವಾರ ಕೋಟ ಮಣೂರು ಕೆ.ಸಿ ಕುಂದರ್ ಸಭಾಂಗಣದಲ್ಲಿ ಪಡುಕರೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಿಂದಿನ ವಿಧ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ ಶೈಕ್ಷಣಿಕ ಜೀವನದ ಪರಿಭಾಷೆಗೆ ಮುನ್ನುಡಿ ಬರೆದ ಶಿಕ್ಷಕರು ತಮ್ಮ ಶಿಷ್ಯವೃಂದಕ್ಕೆ ಬದುಕಿನ ದಾರಿದೀಪ ನೀಡಿ ಆ ವಿದ್ಯಾರ್ಥಿಗಳಿಂದ ಗೌರವ ಸಲ್ಲಿಸಿಕೊಳ್ಳುವುದೇ ಬಹುದೊಡ್ಡ ಭಾಗ್ಯವಾಗಿದೆ.ಶಾಲಾ ಜೀವನವನ್ನು ಮತ್ತೆ ನೆನೆಪಿಸಿ ಆ ಮೂಲಕ ಆಗಿನ ಗುರುಗಳಿಗೆ ವಿಶೇಷ ಗೌರವ ಕಾಣಿಕೆ ಸಲ್ಲಿಸಿದ ಕಾರ್ಯ ನಿಜಕ್ಕೂ ಸಂತೋಷ ನೀಡಿದೆ ಇಂಥಹ ಕಾರ್ಯಕ್ರಮಗಳು ಆಗಾಗ ನಡೆದರೆ ಆ ಗುರುಗಳಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದು ಪುನರ್ ಮಿಲನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ವೇಳೆ 1995,99ರವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಭವಾನಿ ಟೀಚರ್,ಗಾಯಿತ್ರಿ,ಸಹದೇವಿ ಕೋಟ್ಯಾನ್,ಬಸವ ಪೂಜಾರಿ,ಗಜೇಂದ್ರ ಶೆಟ್ಟಿ, ಸಂಜೀವ ಶೆಟ್ಟಿ, ರಾಜೀವ ಶೆಟ್ಟಿ,ಪ್ರಸಿಲ್ಲಾ,ಹರಿದಾಸ್ ಕಿಣಿ,ಕೃಷ್ಣ ಮಾಸ್ಟರ್, ಜ್ಞಾನೇಶ್ಚರಿ,ಶೇಖರ್ ಶೆಟ್ಟಿ,ನಾಗರತ್ನ,ಲಿನೇಖ ಟೀಚರ್,ಶೇಕರಪ್ಪ,ರುದ್ರಾಚಾರ್,ಜ್ಯೋತಿ, ವಿಠ್ಠಲ್ ವಿ ಗಾಂವ್ಕರ್,ರಾಮಚಂದ್ರ ಜೋಶಿ,ನಾಗೇಶ್ ಶ್ಯಾನುಭಾಗ್, ವಿಜಯ ಕುಮಾರ್,ರೇಖಾ ಸಿ ನಾಯಕ್,ಉಮಾಮದೇವಿ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಗಿನ ಕಾಲದಲ್ಲಿ ಐಸ್‍ಕ್ಯಾಂಡಿ ವ್ಯಾಪಾರಿ ಸುಬ್ಬಣ್ಣ ಗಾಣಿಗ ಇವರಿಗೆ ವಿಶೇಷ ಸನ್ಮಾನ ನೀಡಲಾಯಿತು.
ಈ ವೇಳೆ ಶಿಷ್ಯವೃಂದದಿಂದ ಅನಿಸಿಕೆ,ಗುರುಗಳ ನೆನಪಿನ ಬುತ್ತಿ ವೇದಿಕೆಯಲ್ಲಿ ಅನಾವರಣಗೊಂಡಿತು.