Home » ರಾಹುಲ್‌ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿ
 

ರಾಹುಲ್‌ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿ

by Kundapur Xpress
Spread the love

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಹೇಳಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಎಸ್‌ಐಟಿ ವಿಚಾರಣೆಗೆ ಕರೆಯಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಅಂಕಿ ಅಂಶ ಸಮೇತ ಹೇಳಿದ್ದಾರೆ. ಎಲ್ಲರಿಗಿಂತ ಮೊದಲೇ ಈ ಮಾಹಿತಿ ಅವರಿಗೆ ಲಭ್ಯವಾಗಿರಬೇಕು. ಈ ಹಿನ್ನೆಲೆ ಯಲ್ಲಿ ಸಮನ್ಸ್ ಜಾರಿ ಮಾಡಬೇಕು ಎಂದರು. ರಾಹುಲ್ ಗಾಂಧಿ ಅವರು ಅತ್ಯಾಚಾರ ಕ್ಕೊಳಗಾದವರಲ್ಲಿ 16 ವರ್ಷದೊಳಗಿನ ಹೆಣ್ಣುಮಕ್ಕಳಿದ್ದಾರೆ ಎಂದಿದ್ದಾರೆ. ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆ. ಪೋಕೋ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ‘ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರೇ, ಯಾಕಪ್ಪಾ ಇನ್ನೂ ರಾಹುಲ್‌ಗೆ ನೋಟಿಸ್  ಕೊಟ್ಟಿಲ್ಲ’ఎందు ವ್ಯಂಗ್ಯವಾಗಿ ಪ್ರಶ್ನಿಸಿದರು.

ಪ್ರಕರಣದಲ್ಲಿ ಪ್ರಧಾನಿ ಮತ್ತು ಕೇಂದ್ರದ ಗೃಹ ಸಚಿವರನ್ನು ಯಾಕೆ ಎಳೆದು ತರಲಾಗುತ್ತಿದೆ? ಜೆಡಿಎಸ್‌-ಬಿಜೆಪಿ ಮೈತ್ರಿ ಆದಾಗಲೇ ಕಾಂಗ್ರೆಸ್ ನಿದ್ದೆ ಹೋಗಿದೆ. ಅದಕ್ಕೆ ಈ ಪ್ರಕರಣವನ್ನು ರಾಷ್ಟ್ರೀಯ, ಅಂ.ರಾ. ಮಟ್ಟದ ಸುದ್ದಿ ಮಾಡಿಸಲಾಗುತ್ತಿದೆ. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸಂತ್ರಸ್ತ ರಿಗೆ ಹಣಕಾಸು ಪರಿಹಾರ ಕೊಡಲಾಗುವುದು ಎಂದಿದ್ದಾರೆ. ಯಾವ ವಿಡಿಯೋ ಮೊದಲು ಬಿಡಬೇಕು, ಯಾವುದನ್ನು ಆಮೇಲೆ ಬಿಡಬೇಕು ಎಂಬುದನ್ನು ಯೋಜಿಸಿದ್ದು ಯಾರು ? ಎಂದು ಪ್ರಶ್ನಿಸಿದರು.

   

Related Articles

error: Content is protected !!