ಉಡುಪಿ : ಜಿಲ್ಲೆಯ ಕುಂದಾಪುರ, ಬೈಂದೂರು ಮತ್ತು ಉಡುಪಿ ನಗರವೂ ಸೇರಿದಂತೆ, ಇತರ ಭಾಗಗಳಲ್ಲಿ ಸಿ.ಎನ್.ಜಿ’ ಅನಿಲ ಪೂರೈಕೆಯ ಕೊರತೆಯ ಬಗ್ಗೆ ವಿಧಾನ ಪರಿಷತ್ತಿನ ವಿಪಕ್ಷ ನಾಯಕ’ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರೀಪ್ ಸಿಂಗ್ ಪುರಿ ಅವರಿಗೆ ತುರ್ತು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದು, ಇದಕ್ಕೆ ತಕ್ಷಣ ಸ್ಪಂದನ ದೊರೆತಿದೆ.
ಪತ್ರಕ್ಕೆ ಸ್ಪಂದಿಸಿರುವ ಜಿಲ್ಲೆಯ ಪೂರೈಕೆದಾರರಾದ ಅದಾನಿ ಸಂಸ್ಥೆಯು ವಿಪಕ್ಷ ನಾಯಕರಿಗೆ ಬರೆದ ಪತ್ರದಲ್ಲಿ ತುರ್ತಾಗಿ ಈ ಸಮಸ್ಯೆ ಬಗೆಹರಿಸುತ್ತಿರುವುದಾಗಿ ತಿಳಿಸಿದೆ. ಶಾಶ್ವತವಾಗಿ ಸಿ.ಎನ್.ಜಿ ಅನಿಲದ ಕೊರತೆ ನಿವಾರಿಸಲು ಹಿರಿಯಡ್ಕ ಹೆಬ್ರಿ, ಮತ್ತು ಮುಲ್ಲಿಕಟ್ಟೆಯಲ್ಲಿ ನೂತನ ಸ್ಥಾವರ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಸ್ಥಾವರಗಳನ್ನು ನಿರ್ಮಿಸಿ ಸಮಯಕ್ಕೆ ಸರಿಯಾಗಿ ಅನಿಲ ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.